ನವದೆಹಲಿ,ನ.30: ಫಾಸ್ಟ್ ಟ್ಯಾಗ್ ಅಳವಡಿಕೆಗೆ ಡಿಸೆಂಬರ್ 1ರಂದೇ ಕೊನೆಯ ದಿನಾಂಕ ಎಂಬುದಾಗಿ ಆದೇಶ ಹೊರಡಿಸುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿದ್ದ ಕೇಂದ್ರ ಸರ್ಕಾರ, ಈ ಗಡುವನ್ನು ಡಿ.15ರವರೆಗೆ ವಿಸ್ತರಣೆ ಮಾಡುವ ಮೂಲಕ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದೆ.
ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಟೋಲ್ ಪಾವತಿಯ ವೇಳೆ ಹೆಚ್ಚುತ್ತಿರುವ ದಟ್ಟಣೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರವು ಫಾಸ್ಟ್ ಟ್ಯಾಗ್ ನಿಯಮವನ್ನು ಜಾರಿಗೊಳಿಸಿತ್ತು. ಅಲ್ಲದೆ ಸ್ಟಿಕ್ಕರ್ ಅಳವಡಿಕೆಗೆ ಡಿ.1ರಂದೇ ಗಡುವು ನೀಡಿತ್ತು. ಆದರೆ ಬೇಡಿಕೆಗೆ ತಕ್ಕಂತೆ ಆಸ್ಟ್ ಟ್ಯಾಗ್ ಪೂರೈಕೆಯಾಗದ ಹಿನ್ನಲೆಯಲ್ಲಿ ಈ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಇದುವರೆಗೂ ದೇಶದಾದ್ಯಂತ 70 ಲಕ್ಷಕ್ಕೂ ಹೆಚ್ಚಿಗೆ ಫಾಸ್ಟ್ ಟ್ಯಾಗ್ ಖರೀದಿಯಾಗಿದ್ದು, ಫಾಸ್ಟ್ ಟ್ಯಾಗ್ ಮಾರಾಟ ಪ್ರಮಾಣವು ಶೇ.33ರಷ್ಟು ಏರಿಕೆಯಾಗಿರುವುದು ವರದಿಯಾಗಿದೆ. ಒಟ್ಟನಲ್ಲಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ವಿಸ್ತರಣೆ ಕೇಂದ್ರ ಮುಂದಾಗಿರುವುದು ವಾಹನ ಸವಾರರಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ��p�I�