ನವದೆಹಲಿ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. 28 ಕ್ಷೇತ್ರಗಳನ್ನೊಳಗೊಂಡಿರುವ ಕರ್ನಾಟಕದ 14ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ.
- ಬೆಂಗಳೂರು ಕೇಂದ್ರ,
- ಬೆಂಗಳೂರು ಉತ್ತರ,
- ಬೆಂಗಳೂರು ದಕ್ಷಿಣ,
- ಬೆಂಗಳೂರು ಗ್ರಾಮಾಂತರ,
- ಚಿಕ್ಕಬಳ್ಳಾಪುರ,
- ಚಿತ್ರದುರ್ಗ,
ಚಾಮರಾಜನಗರ,
- ದಕ್ಷಿಣಕನ್ನಡ,
- ಉಡುಪಿ-ಚಿಕ್ಕಮಗಳೂರು,
- ಹಾಸನ,
- ಕೋಲಾರ,
- ಮಂಡ್ಯ,
- ಮೈಸೂರು-ಕೊಡಗು,,
- ತುಮಕೂರು.


















































