ವಿಶ್ವದೆಲ್ಲೆಡೆ ಕರೋನಾ ವೈರಸ್‌ಗೆ ದಿನಕಳೆದಂತೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ . ಇತ್ತ ಕರ್ನಾಟಕ ಲಾಕ್‌ಡೌನ್ ಆಗಿದ್ದು ಜನರು ಮನೆಯಲ್ಲೇ ಕುಳಿತು ಕೆಲಸ ಮಾಡುವಂತೆ ಸರ್ಕಾರ ಆದೇಶ ನೀಡಿದೆ. ಜೊತೆಗೆ ೧೪೪ ಸೆಕ್ಷನ್ ಜಾರಿಗೊಳಿಸಿದೆ.
ಆದ್ರೆ ಇಷ್ಟೆಲ್ಲಾ ಸಿರಿಯಸ್ ಇದ್ರು ವೈರಸ್ ಬಗ್ಗೆ ಕಿಂಚಿತ್ತು ಜನ ತಲೆಕೆಡಿಸಿಕೊಳ್ಳದಿರೋದು ಮತ್ತಷ್ಟು ಆತಂಕವನ್ನು ಉಂಟು ಮಾಡುತ್ತಿದೆ.ಹೌದು ದ.ಕ ಜಿಲ್ಲೆಯ ಉಪ್ಪಿನಂಗಡಿಯ ನೆಲ್ಯಾಡಿ ಸಮೀಪ ೧೪೪ ಸೆಕ್ಷನ್ ಗೆ ಜನ ಮಾನ್ಯತೆ ನೀಡುತ್ತಿಲ್ಲ . ಹಲವಾರು ಅಂಗಡಿ ಮುಂಗಟ್ಟುಗಳು ಓಪನ್ ಆಗಿದ್ದು ಪೊಲೀಸರು ಅಂಗಡಿಗಳನ್ನು ಮುಚ್ಚುವಂತೆ ತಿಳಿಸಿದ್ರೂ ವ್ಯಾಪರಸ್ಥರು ಕ್ಯಾರೆ ಅನ್ನುತ್ತಿಲ್ಲ. ಪೊಲೀಸರು ಮಾತು ಮೀರಿ ಅಂಗಡಿಗಳನ್ನು ತೆರೆದಿದ್ದಾರೆ. ಇದರ ಜೊತೆಗೆ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ರು ; ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್‌ಗಳು ಸೇರಿದಂತೆ ಘನ, ಲಘು ವಾಹನಗಳು ಸಂಚರಿಸುತ್ತಿದೆ.
ಕರ್ನಾಟಕ ಸರ್ಕಾರ ಮಾರ್ಚ್ ೩೧ ರವರೆಗೆ ಲಾಕ್ ಡೌನ್ ಮಾಡಲು ಆದೇಶ ನೀಡಿದ್ದು; ಯಾವುದೇ ಸಂಚಾರ ಜಲಜನಸಂಪರ್ಕ ತಪ್ಪಿಸಲು ಹೇಳೋದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾರಿಸಾರಿ ಹೇಳುತ್ತಿದೆ. ಚೀನಾದಿಂದ ಉಂಟಾದ ಈ ಮಾರಕ ರೋಗ ನೋಡು ನೋಡುತ್ತಿದ್ದಂತೆ ಇತರ ದೇಶಗಳಿಗೂ ಹರಡಿದ್ದು ಭಾರತಕ್ಕೂ ತಟ್ಟಿದೆ.