ವಿಶ್ವಕ್ಕೆ ಕಂಟಕ ಕಾದಿದ್ಯ ಅನ್ನೋ ಅನುಮಾನ ಶುರುವಾಗಿದೆ.ಒಂದೆಡೆ ಕೊರೋನಾ ಭೀತಿ ; ಇನ್ನೊಂದೆಡೆ ಪ್ರಳಯ ಎದ್ದಿದೆ ಇದರ ನಡುವೆ ರೈತರಿಗು ಸಂಕಷ್ಟ ಎದುರಾಗಿದೆ.ಇದರ ನಡುವೆ ಪಂಜಾಬ್ ಹರಿಯಾಣ ರಾಜಸ್ಥಾನ ಸೇರಿದಂತೆ ಭಾರತದ ಕೆಲ ರಾಜ್ಯಗಳಲ್ಲಿ ಡೆಸಟರ್್ ಲೋಕಸ್ಟ್ ಮಿಡತೆ ಹಿಂಡು ರೈತರನ್ನು ಕಾಡಲು ಶುರುಮಾಡಿದೆ.ಸದ್ಯ ಮಹಾರಾಷ್ಟ್ರದ ನಾಗ್ಪುರದಲ್ಲಿ ಮಿಡತೆ ರೈತರಿಗೆ ಕಾಟಕೊಡಲು ಶುರು ಹಚ್ಚಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಇನ್ನು ಮಹಾರಾಷ್ಟ್ರಕ್ಕೆ ಮಿಡತೆ ಕಾಲಿಟ್ಟಿರುವ ಹಿನ್ನಲೆ ಬೀದರ್ಗೂ ಬರುವ ಸಾಧ್ಯತೆಯಿದೆ. ಈ ಹಿನ್ನಲೆ ಬೀದರ್ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿದ್ದು ಮುಂಜಾಗೃತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸಕರ್ಾರಕ್ಕೆ ಮನವಿ ಮಾಡಿದ್ದಾರೆ. ಈ ನಡುವೆ ಮುಂಜಾಗೃತ ಕ್ರಮವಾಗಿ ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸರಣಿ ರೂಪದ ಸಭೆಯನ್ನು ಜಿಲ್ಲಾಧಿಕಾರಿ ಎಚ್. ಆರ್. ಮಹದೇವ್ ನಡೆಸಿದ್ದಾರೆ.
ಸುಮಾರು 5 ಕೋಟಿಯಷ್ಟು ದಾಳಿ ನಡೆಸುವ ಸಾಧ್ಯತೆಯಿದ್ದು; ಒಂದು ವೇಳೆ ಈ ರೀತಿ ನಡೆದ್ರೆ ಜಿಲ್ಲೆಯಲ್ಲಿ ಜೈವಿಕ ಕೀಟನಾಶಕಗಳ ಕೊರತೆಯಾಗಬಹುದು. ಅದಕ್ಕಾಗಿ ಜಿಲ್ಲೆಯ ಎಲ್ಲಾ ರೈತರಿಗೆ ಬೆಳೆ ಉಳಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಇದರ ಜೊತೆಯಲ್ಲಿ ಸಂಬಂಧಪಟ್ಟ ಇಲಾಖೆಯವರಿಗೆ ಹಸಿರು ಬೆಳೆಗಳ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ.ಇನ್ನು ಲೋಕೆಸ್ಟ್ ಮಿಡತೆಗಳು ಬಿಸಿಲಿನ ತಾಪ ಹೆಚ್ಚಿರುವಲ್ಲಿ ಕಂಡುಬರುತ್ತಿದ್ದು ಬಿದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪ 43ಕ್ಕೆ ತಲುಪಿರೋದು ಆತಂಕ ಸೃಷ್ಟಿಸಿದೆ.
………………………………………