ಆಧುನಿಕ ಯುಗದಲ್ಲಿ ಮೊಬೈಲ್ ಹವಾ ಜೋರಾಗೆ ಇದೆ. ದಿನಕ್ಕೊಂದರಂದೆ ವಿವಿಧ ಮಾಡೆಲ್ ಹಾಗೂ ಡಿಫರೆಂಟ್ ಫೀಚರ್ಸ್ ಮೊಬೈಲ್‍ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದ್ರೆ ಕೆಲವೊಂದು ಮೊಬೈಲ್‍ಗೆ ಜನ ಕ್ರೇಜ್ ಆಗಿದ್ದು ಅದನ್ನು ಮಾತ್ರ ಖರೀದಿಸುತ್ತಾರೆ. ಇದೀಗ ತಮ್ಮ ನೆಚ್ಚಿನ ಮೊಬೈಲ್‍ನ್ನು ಸರಿಮಾಡಿಸಲು ಹೋಗಿ ಮೊಬೈಲ್ ಬ್ಲಾಸ್ ಆಗಿರೋ ಘಟನೆ ಗುಜರಾತ್‍ನಲ್ಲಿ ನಡೆದಿದೆ.
ಚೀನಾ ಮೂಲದ ಜನಪ್ರೀಯ ಸ್ಮಾರ್ಟ್‍ಫೋನ್ ಶವೋಮಿ ರೆಡ್ಮಿ ಫೋನ್‍ಗೆ ಅದೆಷ್ಟೋ ಗ್ರಾಹಕರು ಫಿದಾ ಆಗಿದ್ದು..ರೆಡ್ಮಿ ಫೋನ್ ಹಲವರ ಕೈಯಲ್ಲಿ ಕುಣಿಯುತ್ತಿದೆ . ಇಲ್ಲೊಬ್ಬ ತನ್ನ ನೆಚ್ಚಿನ ರೆಡ್ಮಿ ನೋಟ್ ಪ್ರೋ 6 ಮೊಬೈಲನ್ನು ಗುಜರಾತಿನ ಧೃತಿ ಮೊಬೈಲ್ ಸೆಂಟರ್‍ನಲ್ಲಿ ಸರಿಮಾಡಿಸಲು ಟೇಬಲ್ ಮೇಲೆ ಇಟ್ಟಿದ್ದು ಮೊಬೈಲ್ ಹಿಂಬಾಗದಿಂದ ಹೊಗೆ ಬರಲು ಶುರುವಾಗಿದೆ ತಕ್ಷಣ ಟೆಕ್ನಿಷಿಯನ್ ಮೊಬೈಲನ್ನು ಕೆಳಗೆ ತಳ್ಳಿದ್ದು ಇದೀಗ ಬ್ಲಾಸ್ಟ್ ಆಗಿರೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.