ಬಳ್ಳಾರಿ: ಕೊಟ್ಟೂರು ಸ್ವಾಮಿ ಮಠದ ಡಾ. ಸಂಗನಬಸವ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಕಳೆದ ಹಲವು ದಿನಗಳಿಂದ ವಯೋಸಹ ಕಾಯಿಲೆಯಿಂದ ಬಳಲುತ್ತಿದ್ದ ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಸಂಗನಬಸವ ಸ್ವಾಮೀಜಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.
ಬಳ್ಲಾರಿ-ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದ ಅಧಿಕಾರ ವಹಿಸಿಕೊಂಡನಂತರ ಡಾ.ಸಂಗನಬಸವ ಸ್ವಾಮೀಜಿಗಳು, ಸರ್ವಧರ್ಮಗಳ ಸಾಮೂಹಿಕ ವಿವಾಹ, ಹರಿಜನ-ಗಿರಿಜನ ಓಣಿಗಳಲ್ಲಿ ಪಾದಯಾತ್ರೆ, ಮನೆ ಮನೆಗೆ ಪ್ರಸಾದ ಇತ್ಯಾದಿ ಕಾರ್ಯಕ್ರಮ ಮೂಲಕ ಜನಾನುರಾಗಿಯಾಗಿದ್ದರು.
9 ಮಠಗಳಲ್ಲಿ ನಿರಂತರವಾಗಿ ಶಿವಾನುಭವಗೋಷ್ಠಿ ರೂಪಿಸಿದ್ದ ಶ್ರೀಗಳು ಹಲವಾರು ಸಮಾಜಮುಖಿ ಕೈಂಕರ್ಯಗಳ ಮೂಲಕ ಮಠ ಸಮಾಜಕ್ಕೆ ಯಾವ ರೀತಿ ಕೊಡುಗೆಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶ್ರೀಗಳ ನಿಧನಕ್ಕೆ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.
Deeply saddened to learn of the sudden demise of His Holiness Shri Dr. Sanganabasava Swamiji, Chief Pontiff of Halakeri Mutt in Gajendragad, Gadag. May God rest his soul in peace and give strength to his devotees to bear this loss! Om Shanti! pic.twitter.com/mcLhvGPGjH
— Dr. Murugesh R Nirani (@NiraniMurugesh) November 22, 2021