ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಜೋಡಿ..ಸಿನಿಮಾ…ಮದ್ವೆ..ಮೊದಲ ಮಗು ಹೀಗೆ ಬ್ಯುಸಿ ಶೆಡ್ಯೂಲ್ ಗಳ ನಡುವೆ ಈ ಜೋಡಿ ಶಾಪಿಂಗ್ ಮಾಡೋದಕ್ಕೆ ಹೋಗದೆ ಬಹು ಕಾಲವಾಗಿತ್ತಂತೆ..ಈ ಕಾರಣಕ್ಕಾಗಿಯೇ ಯಶ್ ಆಂಡ್ ರಾಧಿಕಾ ಸದ್ಯ ಮಗಳಿಗಾಗಿ ಶಾಪಿಂಗ್ ಮಾಡೋದಕ್ಕೆ ಮಾಲ್‍ಗೆ ತೆರಳಿದ್ದರು. ಆಯಿರಾಗೆ 1 ವರ್ಷವಾಗುತ್ತಾ ಬಂದಿದ್ದು, ಮಗಳಿಗಾಗಿ ಸ್ವಲ್ಪ ಟಾಯ್ಸ್ ಕೊಂಡುಕೊಳ್ಳೋದಕ್ಕೆ ಮಾಲ್ ನ ಮಕ್ಕಳ ಟಾಯ್ಸ್ ಸೆಕ್ಷನ್ ಗೆ ತೆರಳಿದ್ದರು..
“ನಾವು ನಮಗಾಗಿ ಶಾಪಿಂಗ್ ಮಾಡಲು ಹೋಗಿ ವರ್ಷಗಳೇ ಕಳೆದಿವೆ. ಆದ್ರೀಗ ಆಯಿರಾಗಾಗಿ ಆಟಿಕೆಕೊಂಡುಕೊಳ್ಳಲು ಮಾಲ್ ಗೆ ಬಂದಿದ್ದೀವಿ. ಜೀವನ ಹೇಗೆ ಬದಲಾಗುತ್ತೆ. ನಾವು ಆಟಿಕೆ ಶಾಪ್ ನಲ್ಲಿ ಎಂಜಾಯ್ ಮಾಡಿದೆವು. ಅವರು ನಮಗೆ ಮನರಂಜನೆ ನೀಡಿದರು” ಎಂದು ಬರೆದುಕೊಂಡಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರು ಆಟಿಕೆಯನ್ನು ಆಯ್ಕೆ ಮಾಡುತ್ತಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ. ರಾಧಿಕಾ ದಂಪತಿ ಸದ್ಯ ಎರಡನೆ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.