ಮಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ… ಮಂಗಳೂರಿನ ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಜೀವ ಬಾಂಬ್ ಪತ್ತೆಯಾಗಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ..ರಿಕ್ಷಾವೊಂದರಲ್ಲಿ ಬಂದ ವ್ಯಕ್ತಿ ತನ್ನ ಆಟೋದಲ್ಲಿ ಇದ್ದ ಬ್ಯಾಗ್‍ವೊಂದನ್ನು ವಿಮಾನ ನಿಲ್ದಾಣದಲ್ಲಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಇದೀಗ ಈ ಬ್ಯಾಗ್‍ಗೆ ಹೊಸ ತಿರುವು ಸಿಕ್ಕಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಸಜೀವ ಬಾಂಬ್ ಪತ್ತೆಯಾದ ಮಾಹಿತಿ ಸಿಕ್ಕಿದೆ. ಇನ್ನು ಬ್ಯಾಗ್ ಎಸೆದು ಹೋದ ವ್ಯಕ್ತಿ ಯಾರು ? ಯಾಕೆ ಬ್ಯಾಗ್ ನಿಲ್ದಾಣದಲ್ಲಿ ಎಸೆದು ಹೋದ ಅನ್ನೋದರ ಮಾಹಿತಿ ಇನ್ನಷ್ಟು ತಿಳಿದು ಬರಬೇಕಾಗಿದೆ. ಇನ್ನು ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಂಡಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.
© 2020 Udaya News – Powered by RajasDigital.