ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ಭಾರೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಂತೂ ಮಳೆ ಅವಾಂತರವನ್ನೇ ಸೃಷ್ಟಿಸಿದೆ.
VIDEO | Rains brought respite from the heat to Bengaluru residents, but they also caused waterlogging and traffic congestion across several parts of the city on Saturday evening. The India Meteorological Department said Bengaluru city recorded 3.6 mm of rainfall with… pic.twitter.com/xD7AVhH9Ge
— Press Trust of India (@PTI_News) March 22, 2025
ಈ ನಡುವೆ, ಮಳೆ ಸಂದರ್ಭದಲ್ಲೇ, ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ಮೂರು ವರ್ಷದ ಹೆಣ್ಣುಮಗು ಸಾವನ್ನಪ್ಪಿ ಘಟನೆ ಮನಕಲಕುವಂತಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ರಾತ್ರಿ ಈ ಘಟನೆ ನಡೆದಿದೆ. ಗಾಳಿ ಮಳೆಗೆ ರಸ್ತೆ ಬದಿ ಮರ ಬೈಕ್ ಮೇಲೆ ಬಿದ್ದಿದೆ. ಬೈಕ್ ನಲ್ಲಿತಂದೆ ಜೊತೆ ತೆರಳುತ್ತಿದ್ದ ರಕ್ಷಾ ಎಂಬ ಮಗುವೀಣೆ ತಲೆ ಮೇಲೆಯೇ ಮರದ ತುಂಡು ಬಿದ್ದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ರಕ್ತಸ್ರಾವವಾಗಿದ್ದರಿಂದಾಗಿ ಬದುಕುಳಿಯಲಿಲ್ಲ.