ನವದೆಹಲಿ: ಬಿಜೆಪಿ ಹಿರಿಯ ನಾಯಕ,ಬಿಹಾರದ ಮಾಜಿ ಡಿಸಿಎಂ ಸುಶೀಲ್ ಮೋದಿ ವಿಧಿವಶರಾಗಿದ್ದಾರೆ. 72 ವರ್ಷ ಹರೆಯದ ಅವರು ಕಳೆದ ಆರು ತಿಂಗಳಿಂದ ಕ್ಯಾನ್ಸರ್ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು.
ಅನಾರೋಗ್ಯ ಕಾರಣದಿಂದಾಗಿ ಅವರು ಈ ಬಾರಿಯ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಹಿರಿಯ ನಾಯಕನ ನಿಧನಕ್ಕೆ ಬಿಜೆಪಿ ಧುರೀಣರು ಸಂತಾಪ ಸೂಚಿಸಿದ್ದಾರೆ.