ಮುಂಬೈ: ಕೆಲವು ದಿನಗಳ ಹಿಂದಷ್ಟೇ ಖ್ಯಾತ ಗಾಯಕಿ ನಿಧನರಾಗಿದ್ದು, ಬಾಲಿವುಡ್ ಕ್ಷೇತ್ರ ಆ ಶೋಕದಲ್ಲಿರುವಾಗಲೇ ಮತ್ತೊಬ್ಬ ಸಂಗೀತ ಮಾಂತ್ರಿಕ ವಿಧಿವಶರಾಗಿದ್ದಾರೆ.
ಖ್ಯಾತ ಗಾಯಕ, 69 ವರ್ಷದ ಬಪ್ಪಿ ಲಹಿರಿ ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಪ್ಪಿ ಲಹಿರಿ, ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಲೇ ಇದ್ದ ಬಪ್ಪಿ ಲಹರಿ ಅವರು, ಕೊಂಚ ಸುಧಾರಿಸಿದ ತಕ್ಷಣ ಸೋಮವಾರವಷ್ಟೇ ಡಿಸ್ಚಾರ್ಜ್ ಆಗಿದ್ದರು. ಮಂಗಳವಾರ ಮತ್ತೆ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇಂದು ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.