ಬೆಂಗಳೂರು: ಬಸವನ ಬಾಗೇವಾಡಿ ತಾಲೂಕಿನಲ್ಲಿ, ಏಳು ವರ್ಷದ ಬಾಲಕನ ಮೇಲೆ ನಡೆದ ಅಮಾನುಷ, ದೌರ್ಜನ್ಯ ಘಟನೆಯ ಸಂಬಂಧ, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ವಿಧಾನ ಪರಿಷತ್ ಗೆ, ತಿಳಿಸಿದ್ದಾರೆ.
ಸದನದ, ಶೂನ್ಯ ವೇಳೆಯಲ್ಲಿ, ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್, ಅವರಿಗೆ ಉತ್ತರಿಸಿದ ಸಚಿವರು, ಸಾಮಾಜಿಕ ಜಾಲತಾಣ ದಲ್ಲಿ ಈ ಘಟನೆ ಕುರಿತು ಪ್ರಕಟವಾಗಿದೆ, ಹಾಗೂ ಜಿಲ್ಲಾ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ ಎಂದರು. ಪ್ರಕರಣದ ಬಗ್ಗೆ ತೀವ್ರ ನೋವಾಗಿದೆ, ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ವಿರೋಧ ಪಕ್ಷದ ನಾಯಕ ಶ್ರೀ B K ಹರಿಪ್ರಸಾದ್ ಸಹ ಮಾತನಾಡಿ, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು.
ಸಭಾಪತಿ ಸ್ಥಾನದಲ್ಲಿದ್ದ ತೇಜಸ್ವಿನಿ ಗೌಡ ಕೂಡಾ, ಧ್ವನಿಗೂಡಿಸಿ, ಇಂಥ ಅಮಾನವೀಯ ಪ್ರಕರಣ ಗಳು ನಡೆಯಬಾರದು ಎಂದು ಹೇಳಿದರು.