ಪ್ಯಾರಿಸ್: ಫ್ರಾನ್ಸ್ ನಲ್ಲಿ ಏರ್ ಶೋ ವೇಳೆ ಭೀಕರ ವಿಮಾನ ದುರಂತ ಸಂಭವಿಸಿದೆ. ಏರ್ ಶೋ ವೇಳೆ ಮಂಗಳವಾರ ಎರಡು ವಿಮಾನಗಳು ಢಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ.
🇫🇷 Two Jets collided at an airshow in France today.
Another plane crashed this week at an Air Show in South Africa.
Too many coincidences involving planes now. pic.twitter.com/xlJgtadlCj
— Concerned Citizen (@BGatesIsaPyscho) March 25, 2025
ಫ್ರಾನ್ಸ್‌ನ ಈಶಾನ್ಯ ವಾಯುನೆಲೆಯಲ್ಲಿ ಫ್ರೆಂಚ್ ವಾಯುಪಡೆಯ ಎರಡು ವಿಮಾನಗಳು ಬಾನಂಗಳದಲ್ಲಿ ಢಿಕ್ಕಿ ಹೊಡೆದಿವೆ. ಆಲ್ಫಾ ಜೆಟ್ ವಿಮಾನಗಳು ಡಿಕ್ಕಿ ಹೊಡೆಡಿದ್ದು, ಬೆಂಕಿ ಕಾಣಿಸಿಕೊಂಡಿತು. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಮೂವರು ಪೈಲೆಟ್’ಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.