ಫೆ.13 ಕರ್ನಾಟಕ ಸ್ತಬ್ಧವಾಗಲಿದೆ.ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಆಗ್ರಹಿಸಿ ಹಲವು ಕನ್ನಡಪರ ಸಂಘಟನೆಗಳು ಹೋರಾಟ ನಡೆಸಲು ಸಿದ್ಧವಾಗಿದೆ. 100 ದಿನಗಳ ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸಿದ ಹಿನ್ನಲೆ ಬಂದ್ ಮಾಡಲು ನಿರ್ಧಾರ ಕೈಗೊಂಡಿದ್ದು 400ಕ್ಕಿಂತಲೂ ಹೆಚ್ಚು ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.
ಇನ್ನು ನಾಳೆಯ ಬಂದ್‍ನಲ್ಲಿ ಸರ್ಕಾರಿ ಬಸ್ಸ್‍ಗಳು ಇರಲಿದ್ದು ನೈತಿಕವಾಗಿ ಮಾತ್ರ ಬೆಂಬಲ ಸೂಚಿಸಿವೆ.ಇನ್ನು ಉಬರ್, ಓಲಾ ಸಂಪೂರ್ಣವಾಗಿ ಬಂದ್ ಆಗಲಿದ್ದು ಇವೆರಡರಲ್ಲಿ ಓಡಾಡುವ ಜನರಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಲಿದೆ. ಉಳಿದಂತೆ ಶಾಲಾ – ಕಾಲೇಜುಗಳುಇರಲಿದ್ದು ಪರಿಸ್ಥಿತಿ ಅನುಸಾರವಾಗಿ ಅಲ್ಲಿಯ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ. ಲಾರಿ ಚಾಲಕರು, ಬ್ಯಾಂಕ್, ಸಿಬ್ಬಂದಿ ನೈತಿಕ ಬೆಂಬಲ ನೀಡಲಿದ್ದು ದೈನಂದಿನ ವಸ್ತುಗಳು ಎಂದಿನಂತೆ ಸಿಗಲಿದೆ.