ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭೆ ಕ್ಷೇತ್ರದ ಪ್ರವಾಹಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಅಥಣಿ ತಾಲೂಕಿನ ಸತ್ತಿ, ದರೂರ, ಹಲ್ಯಾಳ ಗ್ರಾಮಗಳಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಅಲ್ಲದೆ ಸಂತ್ರಸ್ತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದಾರೆ.
ನಾವು ಕಾಂಗ್ರೆಸ್ ನಂಬಿ ಮಹೇಶ್ ಕುಮಟೊಳ್ಳಿ ಅವರಿಗೆ ಮತ ಹಾಕಿದ್ವಿ, ಆದ್ರೆ ಮಹೇಶ್ ನಮಗೆ ಮೋಸ ಮಾಡಿದ್ದಾರೆ. ನೀವಾದ್ರೂ ನಮ್ಮ ಕೈ ಹಿಡೀರಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.




























































