ಹಾಸನ: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ವೀಡಿಯೋ ಹಂಚಿದ ಆರೋಪ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ನ ಜಾಮೀನು ಅರ್ಜಿಯನ್ನು ಹಾಸನದ ನ್ಯಾಯಾಲಯ ವಜಾ ಮಾಡಿದೆ. ಪೆನ್ಡ್ರೈವ್ ಹಂಚಿದಬಆರೋಪದಡಿ ಚಾಲಕ ಕಾರ್ತಿಕ್ ಗೌಡ ಹಾಗೂ ಇತರ ಆರೋಪಿಗಳಾದ ಪುಟ್ಟರಾಜ್, ನವೀನ್, ಚೇತನ್ ಹಾಸನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿದೆ.