ಮೇಷ ರಾಶಿ:- ಹೊಗಳಿಕೆ ಹಾಗೂ ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಿ. ಇದರಿಂದ ನಿಮ್ಮ ಘನತೆ ಹೆಚ್ಚಲಿದೆ. ಕೆಲ ದಿನಗಳಿಂದ ಗೊಂದಲದಿಂದ ಕೂಡಿದ್ದ ವಿಚಾರಕ್ಕೆ ಕೊನೆಗೂ ಮುಕ್ತಿ ಸಿಗಲಿದೆ. ಇದರಿಂದ ಆರ್ಥಿಕ ಸಂಕಷ್ಟ ಕಡಿಮೆಯಾಗಲಿದೆ. ಮನೆಯಲ್ಲಿ ಸಂಭ್ರಮ. ಆದರೆ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಅನ್ಯರಿಗೆ ನಿಮ್ಮ ಮಾತು ನೋವುಂಟುಮಾಡಬಹುದು. ತಾಳ್ಮೆ ಮುಖ್ಯ. ಅದೃಷ್ಟ ಸಂಖ್ಯೆ-2
ವೃಷಭ ರಾಶಿ:- ಪ್ರವಾಸ ಕೈಗೊಳ್ಳುವ ಅವಕಾಶ ಬರಲಿದ್ದು, ಸದುಪಯೋಗಪಡಿಸಿಕೊಳ್ಳುವುದು ಉತ್ತಮ. ಹಣದ ಸ್ಥಿತಿ ಉತ್ತಮವಾಗಿರಲಿದ್ದರೂ, ಅನವಶ್ಯಕ ಖರ್ಚಿನ ಬಗ್ಗೆ ನಿಗಾ ವಹಿಸಿ. ದೊಡ್ಡ ಪ್ರಮಾಣದ ಉಳಿತಾಯ ಯೋಜನೆ ಇದ್ದಲ್ಲಿ ಎಲ್ಲಾ ರೀತಿಯ ಸಾಧಕಬಾಧಕಗಳ ಬಗ್ಗೆ ಯೋಚಿಸಿ ನಿರ್ಧರಿಸಿ. ನೆರೆಹೊರೆಯವರೊಂದಿಗೆ ಉತ್ತಮ ಸ್ನೇಹ ಸಂಬಂಧ ಇರಿಸಿಕೊಳ್ಳುವುದು ಉತ್ತಮ. ಅದೃಷ್ಟ ಸಂಖ್ಯೆ-1
ಮಿಥುನ:- ದಿನದ ಅಂತ್ಯದವರೆಗೂ ಸರಿಯಾದುದನ್ನು ಚರ್ಚಿಸಿ, ವಿಮರ್ಶಿಸಿಯೇ ಕಾರ್ಯೋನ್ಮುಖರಾಗುವುದು ಒಳಿತು. ದಿಢೀರ್ ತೆಗೆದುಕೊಳ್ಳುವ ನಿರ್ಧಾರ ಕೆಲವೊಮ್ಮೆ ನಿಮಗೆ ಮಾರಕವಾಗುವ ಸಾಧ್ಯತೆ ಇದೆ. ಅದೃಷ್ಟ ಸಂಖ್ಯೆ-5
ಕಟಕ:- ಹೊಸಬರನ್ನು ಅವರ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಅವರ ಜೊತೆ ವ್ಯವಹರಿಸದಿರಿ. ಕೆಲವು ಅನುಮಾನಗಳು ನಿಮ್ಮಲ್ಲಿಹುಟ್ಟುವುದು. ಆ ಅನುಮಾನಗಳನ್ನು ತಾರ್ಕಿಕವಾಗಿ ಚಿಂತಿಸಿ, ಅವುಗಳಿಗೆ ವಿರಾಮ ಹಾಡಿ. ಅದೃಷ್ಟ ಸಂಖ್ಯೆ-5
ಸಿಂಹ:- ಒಳದನಿಯ ಜೊತೆಯಲ್ಲಿಗುರು, ಹಿರಿಯರ ಹಿತನುಡಿಗಳಿಗೆ ಮಹತ್ವ ನೀಡಿ ಕಾರ್ಯ ಪ್ರವೃತ್ತರಾಗಿ. ಇದರಿಂದ ಒಂದು ಮಹತ್ತರವಾದ ಕಾರ್ಯ ಮಾಡಲು ಪ್ರೇರಣೆ ದೊರೆಯುವುದು. ಅದೃಷ್ಟ ಸಂಖ್ಯೆ-6
ಕನ್ಯಾ:– ಅನೇಕ ದಿನಗಳಿಂದ ರೂಢಿಸಿಕೊಳ್ಳಬೇಕು ಎಂದುಕೊಂಡ ಯೋಜನೆಗಳನ್ನು ಸೂಕ್ತವಾಗಿ ನೆರವೇರಿಸಿಕೊಳ್ಳುವಿರಿ. ಇದರಿಂದ ಸಮಾಜದಲ್ಲಿಗೌರವ ಸಂಪಾದಿಸುವಿರಿ. ಹಣಕಾಸಿನ ಚಿಂತೆ ಬೇಡ. ಅದೃಷ್ಟ ಸಂಖ್ಯೆ-4
ತುಲಾ:- ನಿಮ್ಮ ಗೆಳೆಯರೇ ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ. ಅವರನ್ನು ಜಾಗರೂಕತೆಯಿಂದ ಎದುರಿಸಿ. ಮನೆಯ ಹಿರಿಯರೊಬ್ಬರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ಅಗತ್ಯ. ಅದೃಷ್ಟ ಸಂಖ್ಯೆ-9
ವೃಶ್ಚಿಕ:- ನಿಮ್ಮಲ್ಲಿಬೆಟ್ಟವನ್ನೆ ತಂದು ಪುಡಿಮಾಡುವ ಶಕ್ತಿ ಇದೆ. ಆದರೆ ಏಕೋ ಮಂಕಾಗಿರುವಿರಿ. ನಿಮ್ಮಲ್ಲಿಹೊರನೋಟಕ್ಕೆ ಉತ್ಸಾಹ ತುಂಬಿ ತುಳುಕುತ್ತಿದ್ದರೂ ಕ್ರಿಯಾಶೀಲತೆಗೆ ಬೇಕಾದ ತುಡಿತ ಮಾತ್ರ ಕಾಣುತ್ತಿಲ್ಲ. ಆದಷ್ಟು ಕುಲದೇವರನ್ನು ಪ್ರಾರ್ಥಿಸಿ. ಅದೃಷ್ಟ ಸಂಖ್ಯೆ-6
ಧನುಸ್ಸು:- ನಿಮ್ಮ ನಿಲುವಿನಲ್ಲಿನ ಅತಿಯಾದ ಆತ್ಮವಿಶ್ವಾಸ ನಿಮಗೇ ಮುಳುವಾಗುವ ಸಂಗತಿಗಳು ಗೋಚರಿಸುತ್ತಿವೆ. ಅವುಗಳ ಬಗ್ಗೆ ಸ್ನೇಹಿತರ ಬಳಿ ಚರ್ಚಿಸಿ ಕೆಲವೊಂದು ಉಪಯುಕ್ತ ಸಲಹೆಗಳು ದೊರೆಯುವುವು. ಅದೃಷ್ಟ ಸಂಖ್ಯೆ-5
ಮಕರ:- ಸೂಕ್ತ ತಯಾರಿ ಇಲ್ಲದೆಯೇ ವಿಚಿತ್ರವಾದ ನಿರ್ಧಾರಗಳನ್ನು ಮಾಡಿ ಮುಗಿಸಲು ಮುಂದಾಗುವಿರಿ. ಆದರೆ ಅಂತಿಮವಾಗಿ ಇದರಲ್ಲಿಹಾನಿ ಅನುಭವಿಸುವಿರಿ. ಕೆಲಸ ಕೈಗೆತ್ತಿಕೊಳ್ಳುವ ಮುನ್ನ ಎರಡು ಬಾರಿ ಚಿಂತಿಸಿ. ಅದೃಷ್ಟ ಸಂಖ್ಯೆ-9
ಕುಂಭ:- ನೀವು ಸವೆಸುತ್ತಿರುವ ದಾರಿಯ ಬಗ್ಗೆ ಅನುಮಾನ ಬೇಡ. ನಿಮಗೆ ಮುಂದೆ ಉತ್ತಮವಾದ ಕಾಲಾವಕಾಶ ಬೇಕೆಂದರೆ ಈ ದಿನ ನಿಮಗೆ ಕೆಲವು ಪರೀಕ್ಷೆಗಳು ಎದುರಿಸಬೇಕಾಗುವುದು. ಅದೃಷ್ಟ ಸಂಖ್ಯೆ-2
ಮೀನ:- ಮಂಗಳ ಕಾರ್ಯಗಳಲ್ಲಿಭಾಗವಹಿಸಲು ಹೋದಾಗ ನಿಮ್ಮ ಮೈಮೇಲಿನ ಆಭರಣಗಳ ಬಗ್ಗೆ ಗಮನ ನೀಡಿ. ಕೆಲವರು ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಅದೃಷ್ಟ ಸಂಖ್ಯೆ-1