ಮುಂಬೈ: ಹಿಂದಿ ಚಿತ್ರರಂಗದಿಂದ ಆಘಾತಕಾರಿ ಸುದ್ದಿ ವರದಿಯಾಗಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಿವ ಸಂಚು ಬಯಲಾಗಿದ್ದು, ಮುಂಬಯಿ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಿಷ್ಣೋಯ್ ಗ್ಯಾಂಗ್ ನ ನಾಲ್ವರ ಬಂಧನವಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರು ಶಾರ್ಪ್ ಶೂಟರ್‌ಗಳೆನ್ನಲಾದ ಧನಂಜಯ್, ಗೌರವ್ ಭಾಟಿಯಾ, ವಾಸ್ಪಿ ಖಾನ್ ಮತ್ತು ರಿಜ್ವಾನ್ ಖಾನ್ ಎಂಬವರನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದು, ಸಂಚಿನ ಬಗ್ಗೆ ಮಹತ್ವದ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ.
ನಟ ಸಲ್ಮಾನ್ ಖಾನ್ ಕಾರಿನ ಮೇಲೆ ದಾಳಿ ಮಾಡಲು ಈ ದಾಳಿ ನಡೆಸಲು ಈ ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ.







































































