ಬೆಳಗಾವಿ: ದೂದ್ಗಂಗಾ ನದಿಯಲ್ಲಿ ನಾಲ್ವರು ಜಲ ಸಮಾಧಿಯಾದ ಘೋರ ದುರಂತ ಘಟಿಸಿದೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ ತಾಲೂಕಿನ ಬಸ್ತವಾಡೆ ಸೇತುವೆ ಬಳಿ ಈ ಘಟನೆ ನಡೆದಿದ್ದು ಬಟ್ಟೆ ತೊಳೆಯಲು ತೆರಳಿದ್ದವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾಗಲ ತಾಲೂಕಿನ ಅನ್ನುರ ಗ್ರಾಮದ ಜಾತ್ರೆಗೆ ತೆರಳಿದ್ದ ಇವರು ನದಿಗೆ ತೆರಳಿದ್ದರು.
ಮೃತರನ್ನು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿಗಳಾದ 34 ವರ್ಷ ಹರೆಯದ ರೇಷ್ಮಾ ದಿಲೀಪ್ ಏಳಮಲೆ, 17 ವರ್ಷ ಹರೆಯದ ಯಶ್ ದಿಲೀಪ್ ಏಳಮಲೆ, ಕೊಲ್ಹಾಪುರ ಜಿಲ್ಲೆಯ ನಿವಾಸಿ 36 ವರ್ಷದ ಜಿತೇಂದ್ರ ಲೋಕರೆ ಹಾಗೂ 27 ವರ್ಷ ವಯಸ್ಸಿನ ಸವಿತಾ ಕಾಂಬಳೆ ಎಂದು ಗುರುತಿಸಲಾಗಿದೆ.

























































