ಹೈದರಾಬಾದ್: ತೆಲಂಗಾಣ ಸರ್ಕಾರ ಇದೀಗ ತನ್ನ ಆಡಳಿತದಲ್ಲಿ ಅಚ್ಚರಿಯ ಬದಲಾವಣೆಗೆ ಮುನ್ನುಡಿ ಬರೆದಿದೆ. ತನ್ನ ರಾಜ್ಯದ ಸಂಕ್ಷಿಪ್ತ ರೂಪ ‘ಟಿಎಸ್’ ಬದಲಿಗೆ ‘ಟಿಜಿ’ ಎಂದು ಬದಲಾಯಿಸಿದೆ.
ಸರ್ಕಾರದ ಆದೇಶದಂತೆ ವಾಹನಗಳ ನಂಬರ್ ಪ್ಲೇಟ್ ಸಹಿತ ಎಲ್ಲಾ ನಿಗಮ-ಮಂಡಳಿ, ಆಡಳಿತ ವಿಚಾರಗಳಲ್ಲಿ ‘ಟಿಎಸ್’ ಬದಲಿಗೆ ‘ಟಿಜಿ’ ಎಂದು ಬಳಕೆ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.