ಬೆಂಗಳೂರು: ತಮಿಳುನಾಡು ಮುಜರಾಯಿ ಖಾತೆ ಸಚಿವ P ಸೇಕರ್ ಅವರ ಪುತ್ರಿ ಜಯ ಕಲ್ಯಾಣಿ (೨೪) ಹಾಗೂ ಅವರ ಪತಿ ಸತೀಶ್ ಅವರು ಬಧವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಚಿವರನ್ನು ಭೇಟಿಯಾಗುವ ಮುನ್ನ, ಈರ್ವರೂ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ರಕ್ಷಣೆಗಾಗಿ ಮನವಿ ಸಲ್ಲಿಸಿದ್ದರು. ತನ್ನನ್ನು ಎಂಬಿಬಿಎಸ್ ಪದವೀಧರೆ ಎಂದು ಪರಿಚಯಿಸಿಕೊಂಡ ಜಯ ಕಲ್ಯಾಣಿ ಅವರು, ತಾವು ಪರಸ್ಪರ ಒಪ್ಪಿಗೆ ಮೂಲಕ ವಿವಾಹವಾಗಿದ್ದು, ತಮ್ಮ ಪತಿಯವರ ವಿರುಧ್ದ ಸತ್ಯಕ್ಕೆ ದೂರವಾದ ದೂರು ದಾಖಲಿಸುವ ಪ್ರಯತ್ನದ ಬಗ್ಗೆ, ಅನುಮಾನವಿದ್ದು, ರಕ್ಷಣೆ ನೀಡಬೇಕೆಂದು ವಿನಂತಿಸಿದರು.