ಲ್ಯಾಬೆನೆಸೆ,ನ.13: ಲೆಬನಾನ್ ಪಶ್ವಿಮ ವಿಭಾಗವು ಪ್ರಮುಖ ಪ್ರವಾಸೀ ತಾಣವಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.. ಅದ್ರಲ್ಲೂ ಲಿಬಿಯಾನಾ ದೇಶದ ಬೀರತ್ ಬಳಿಯ ಬೃಮನ್ನಾ ಎಂಬ ಸ್ಥಳವಂತೂ ಪ್ರವಾಸೀ ತಾಣಕ್ಕಿಂತಲೇ ಹೆಚ್ಚಾಗಿ ಸದ್ಯ ಹೆಸರು ಪಡೆದುಕೊಂಡಿದೆ..ಅದ್ಯಾಕೆ ಅಂತೀರಾ.. ಅಲ್ಲಿನ ಮೇಯರ್ ಪೀರ್ರೆ ಅಚ್ಕರ್ ಎಂಬವರು ಮಹಿಳಾ ಪೊಲೀಸರ ಸಮವಸ್ತ್ರದ ಬಗ್ಗೆ ಕೈಗೊಂಡಿರುವ ನಿರ್ಧಾರವೀಗ ವಿಶ್ವವೇ ಇವರತ್ತ ತಿರುಗಿ ನೋಡುವಂತೆ ಮಾಡಿದೆ.
ಹೌದು.. ಇಲ್ಲಿನ ಪ್ರತಿಯೊಬ್ಬ ಮಹಿಳಾ ಪೇದೆಯೂ ಕೂಡಾ ಕಡ್ಡಾಯವಾಗಿ ಬ್ಲ್ಯಾಕ್ ಶರ್ಟ್ ಹಾಗೂ ಬ್ಲ್ಯಾಕ್ ಶಾರ್ಟ್ಸ್ ನ್ನು ಧರಿಸಬೇಕಂತೆ…ಇದು ಆಧುನಿಕತೆಯ ಸಂಕೇತ ಎಂಬುದಾಗಿ ಮೇಯರ್ ಹೇಳಿಕೆ ನೀಡಿದ್ದಾರೆ. ಈ ವಿಶಿಷ್ಟ ಬಗೆಯ ಸಮವಸ್ತ್ರ ಅವರು ಕರ್ತವ್ಯ ನಿರ್ವಹಿಸಲು ಅನುಕೂಲವಾಗಲಿದೆ ಎಂಬುದು ಮೇಯರ್ ಅಚ್ಕರ್ ಪ್ರತಿಪಾದನೆಯಾಗಿದೆ.
ಮಹಿಳೆಯರಿಗೆ ಅಪ್ಲೈ ಆಗುವ ಈ ರೂಲ್ಸ್ ಪುರುಷರಿಗಿಲ್ಲ ಬಿಡಿ..ಒಟ್ನಲ್ಲಿ ಮೇಯರ್ ಕ್ರಮದ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅನಗತ್ಯವಾಗಿ ಮಹಿಳಾ ಪೊಲೀಸರನ್ನು ಎಕ್ಸ್ ಪೋಸ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.