ಮುಂಬಯಿ: ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ತಾವು ಪ್ರಚಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಬಾಲಿವುಡ್ ನಟ ರಣ್‌ವೀರ್ ಸಿಂಗ್, ಇತ್ತೀಚೆಗೆ ವೈರಲ್ ಆಗಿರುವುದು ತಮ್ಮ ಡೀಪ್‌ಫೇಕ್ ವೀಡಿಯೋ ಎಂದಿದ್ದಾರೆ.
ತಮ್ಮ ಡೀಪ್‌ಫೇಕ್ ವೀಡಿಯೋ ಬಗ್ಗೆ ನಟ ರಣ್‌ವೀರ್ ಸಿಂಗ್ ದೂರು ದಾಖಲಿಸಿದ್ದಾರೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ರಣ್‌ವೀರ್ ಸಿಂಗ್, ಸಂದರ್ಶನವೊಂದರ ವೀಡಿಯೋಗೆ ಕಿಡಿಗೇಡಿಗಳು ಎಐ ಫೇಕ್ ಆಡಿಯೋ ಸೇರಿಸಿದ್ದಾರೆ ಎಂದು ದೂರಿದ್ದಾರೆ. ತಾವು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದವರು ತಿಳಿಸಿದ್ದಾರೆ.























































