ಸ್ಯಾಂಡಲ್‍ವುಡ್‍ನಲ್ಲಿ ನಿಖಿಲ್ ಮುದುವೆಯದ್ದೇ ಸುದ್ದಿ.. ಸದ್ಯದಲ್ಲೇ ನಿಖಿಲ್ ಕಲ್ಯಾಣವಾಗುತ್ತಿದ್ದಾರೆ.. ಆದರೆ ಕಾಲಿವುಡ್‍ನ ಹೀರೋ ನಿಖಿಲ್ ಸಿದ್ದಾರ್ಥ್ ಕೂಡ ತಮ್ಮ ಬಹು ದಿನದ ಗೆಳತಿ ರೇವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಏಪ್ರಿಲ್ 10ಕ್ಕೆ ಮದುವೆ ದಿನಾಂಕವನ್ನು ಹಿರಿಯರು ನಿಶ್ಚಯಿಸಿದ್ದು ; ಭರ್ಜರಿಯಾಗಿ ತಯಾರಿ ನಡೆಯುತ್ತಿದೆ.
ಇನ್ನೊಂದೆಡೆ ನಿಖಿಲ್ ಸಿದ್ದಾರ್ಥ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು ಇಬ್ಬರ ಜೋಡಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿದ್ದ ನಿಖಿಲ್ ಆಂಡ್ ಪಲ್ಲವಿ ಕೆಲದಿನಗಳ ಕಾಲ ಕದ್ದುಮುಚ್ಚಿ ಡೇಟಿಂಗ್ ಮಾಡಿದ್ದಾರೆ ನಂತರ ಗೋವಾದಲ್ಲಿ ಫಿಲ್ಮೀಂ ಸ್ಟೈಲ್‍ನಲ್ಲಿ ನಿಖಿಲ್ ಪ್ರಪೋಸ್ ಮಾಡಿದ್ದಾರೆ ಇನ್ನು ಪೋಷಕರು ಇವರಿಬ್ಬರ ಲವ್‍ಸ್ಟೋರಿಗೆ ಗ್ರೀನ್ ಸಿಗ್ನಲ್ ನೀಡಿದ್ದು ಫೆ. 1 ರಂಉ ಹೈದರಾಬಾದ್‍ನ ಖಾಸಗಿ ಹೋಟೆಲ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
© 2020 Udaya News – Powered by RajasDigital.