ಬೆಂಗಳೂರು: ಬೆಳಗಾವಿಯ ಜೈನ ಮುನಿ ಹತ್ಯೆ ಪ್ರಕರಣ ಹಾಗೂ ಮೈಸೂರಿನ ತಿ.ನರಸಿಪುರದಲ್ಲಿ ನಡೆದ ಯುವಾ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯು ಸತ್ಯ ಶೋಧನ ತಂಡವನ್ನು ರಚಿಸಿದ್ದು ಈ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ ರಚನೆಯಾಗಿರುವ ಈ ಸಮಿತಿಗಳು, ಘಟನೆಗಳ ಸತ್ಯವನ್ನು ತಿಳಿಯುವ ಪ್ರಯತ್ನ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ನೇತೃತ್ವದ ಬಿಜೆಪಿ ನಿಯೋಗವು ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತದಲ್ಲಿರುವ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿ ಪೂಜ್ಯ ಮುನಿಗಳ ಹತ್ಯೆಯ ಮಾಹಿತಿ ಪಡೆಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ @MTenginkai, ಶ್ರೀ ಅಭಯ್ ಪಾಟೀಲ್, ರಾಜ್ಯ ಪ್ರಧಾನ… pic.twitter.com/sKMXsnoRg5
— BJP Karnataka (@BJP4Karnataka) July 11, 2023
ಈ ಕುರಿತಂತೆ ಮಾಹಿತಿ ಹಂಚಿಕೊಢಿರುವ ಬಿಜಡಪಿ ನಾಯಕರು, ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ 11 ಮಂದಿ ಹಾಗೂ. ಸಿ.ಟಿ.ರವಿ ನೇತೃತ್ವದ ತಂಡದಲ್ಲಿ 10 ಸದಸ್ಯರು ಇದ್ದಾರೆ..
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @CTRavi_BJP ಅವರ ನೇತೃತ್ವದ ಬಿಜೆಪಿ ನಿಯೋಗವು ಇಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಯುವಾ ಬ್ರಿಗೇಡ್ ಕಾರ್ಯಕರ್ತ ಶ್ರೀ ವೇಣುಗೋಪಾಲ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಸಚಿವರಾದ ಶ್ರೀ @drashwathcn, ಶಾಸಕರಾದ ಶ್ರೀ ಶ್ರೀವತ್ಸ,… pic.twitter.com/pXHTTyzN4S
— BJP Karnataka (@BJP4Karnataka) July 11, 2023
























































