ಕಾಂತಾರ ಸಿನಿಮಾ ಮೂಲಕ ಗಮನಸೆಳೆದಿರುವ ನಟ ಪ್ರಮೋದ್ ಶೆಟ್ಟಿ ಅಭಿನಯದ ‘ಜಲಂಧರ’ ಸಿನಿಮಾ ನವೆಂಬರ್ 29ರಂದು ಬಿಡುಗಡೆಯಾಗಲಿದೆ.
ಟಗರು ಖ್ಯಾತಿಯ ನಟಿ ಋಷಿಕಾ ರಾಜ್ ಕೂಡಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ಆರೋಹಿತಾ ಗೌಡ, ಬಲರಾಜ್ ವಾಡಿ, ರಘು ರಾಮನಕೊಪ್ಪ, ನವೀನ್ ಸಾಗರ್, ಪ್ರತಾಪ್ ನನಸು, ಆದಿ ಕೇಶವರೆಡ್ಡಿ, ಸಹಿತ ಅನೇಕ ಕಲಾವಿದರು ‘ಜಲಂಧರ’ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ನವೆಂಬರ್ 29ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.