ಶ್ರೀನಗರ: ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಕದ್ದರ್ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಕುಲ್ಗಮ್ ಜಿಲ್ಲೆಯ ಕದ್ದರ್ ಪ್ರದೇಶದಲ್ಲಿ ಗುರುವಾರ ಪೊಲೀಸ್ ಮತ್ತು ಭದ್ರತಾ ಪಡೆ ಜಂಟಿ ಕಾರ್ಯಾಚರಣೆ ವೇಳೆ ಭಯೋತ್ಪಾದಕರ ಅಡಗುತಾಣವನ್ನು ಪತ್ತೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಯೋಧರತ್ತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿವೆ.
ಜಮ್ಮುವಿನಲ್ಲಿ ಹೆಚ್ಚು ತರಬೇತಿ ಪಡೆದ ಭಯೋತ್ಪಾದಕರು ವಾಹನಗಳ ಮೇಲೆ ಹೊಂಚು ಹಾಕಿ ಗ್ರೆನೇಡ್‌ಗಳು ಮತ್ತು ರಕ್ಷಾಕವಚ-ಚುಚ್ಚುವ ಗುಂಡುಗಳು ಹಾಗೂ M4 ಅಸಾಲ್ಟ್ ರೈಫಲ್‌ಗಳನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಕಲೆಹಾಕಿರುವ ಭದ್ರತಾಪಡೆ ಕೆಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ.