ಡಿಜಿಟಲ್ ಯುಗದಲ್ಲಿ ಡಿಜಿಟಲ್ ಹವಾ ಅನ್ನೋ ಮಟ್ಟಿಗೆ ಜೀವನ ಶೈಲಿ ಬದಲಾಗಿದೆ..ಹಿಂದೆ ಯಾವುದೇ ವಸ್ತು ತೆಗೆದುಕೊಳ್ಳಬೇಕಾದ್ರೂ ಕೊಡಬೇಕಾದ್ರು ಹಣವನ್ನು ಜೇಬಲ್ಲಿ ಜೋಪಾನವಾಗಿ ಇಡಬೇಕಿತ್ತು.. ಇನ್ನು ಕಳ್ಳರ ಕಾಟವೂ ಆ ಸಮಯದಲ್ಲಿ ಜೋರಾಗಿಯೇ ಇತ್ತು. ಆದ್ರೆ ಕಾಲಬದಲಾದಂತೆ ಈಗ ಜೇಬಲ್ಲಿ ಇಡೋ ಮೊತ್ತವನ್ನು ಅಕೌಂಟಲ್ಲೇ ಭದ್ರವಾಗಿ ಇಟ್ಟು ಏನ್ ಬೇಕಾದ್ರು ಕ್ಷಣಮಾತ್ರದಲ್ಲಿ ಪಡೆಯೋ ಸೌಲಭ್ಯವನ್ನು ಫೋನ್ ಪೇ, ಗೂಗಲ್ ಪೇ ಆಪ್ ಜನರಿಗೆ ನೀಡಿತ್ತು..ಎಷ್ಟರ ಮಟ್ಟಿಗೆ ಪ್ರಜೆಗಳು ಇದಕ್ಕೆ ಅವಲಂಬಿತರಾಗಿದ್ರೂ ಅಂದ್ರೆ ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಚಿಕ್ಕಚಿಕ್ಕ ಗೂಡಂಗಡಿ ಮಾಲಿಕರು ಗೂಗಲ್ ಪೇ , ಫೋನ್ ಪೇ ಆಪ್ ತಮ್ಮದೇ ಅನ್ನೋ ಮಟ್ಟಿಗೆ ದಿನಬಳಕೆಯಾಗಿ ಯೂಸ್ ಮಾಡ್ತಿದ್ರು.
ಆದ್ರೆ ಪ್ರತಿದಿನ ಗೂಗಲ್ ಪೇ , ಫೋನ್ ಪೇ ಮೂಲಕ ಟ್ರಾಂಜಕ್ಷನ್ ಮಾಡಿ ಹಣ ವ್ಯವಹಾರ ಮಾಡುತ್ತಿದ್ದ ಜನರಿಗೆ ಇದೀಗ ಶಾಕಿಂಗ್ ನ್ಯೂಸನ್ನು ಈ ಅಪ್ಲಿಕೇಶನ್ ನೀಡಿದೆ.ಇನ್ಮುಂದೆ ಗೂಗಲ್ ಪೇ , ಫೋನ್ ಪೇ ನಿಷೇಧವಾಗುವ ಎಲ್ಲಾ ಲಕ್ಷಣಗಳು ಎದ್ದುಕಾಣುತ್ತಿದೆ.
ಎಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನಲೆ ರಿಸರ್ವ್ ಬ್ಯಾಂಕ್ ಎಸ್ ಬ್ಯಾಂಕ್ ನಿಷೇಧ ಹೇರಿದೆ. ಇದರ ಪರಿಣಾಮ ಇದೀಗ ಫೋನ್ ಪೇ , ಗೂಗಲ್ ಪೇ ಮೇಲೆ ಬಿದ್ದಿದೆ. ಯೆಸ್ ಬ್ಯಾಂಕ್ ಜೊತೆ ಹಣಾ ವರ್ಗಾವಣಾ ಕಲೆಸವನ್ನು ಗೂಗಲ್ ಪೇ ಮಾಡಿದ್ದು ಇದೀಗ ಆಫ್ ಕೆಲಸಮಾಡದಿರಲು ಕಾರಣವಾಗಿದೆ.ಒಟ್ಟಾರೆ ಯಾವುದೇ ಟೆನ್ಷನ್ ಇಲ್ಲದೆ ಹಣವರ್ಗಾವಣೆ ಮಾಡುತ್ತಿದ್ದ ಜನಸಾಮಾನ್ಯರಿಗೆ ಕೊಂಚ ದಿನದ ಮಟ್ಟಿಗೆ ಫೋನ್ ಪೇ ಹಾಗೂ ಗೂಗಲ್ ಪೇ ಯಿಂದ ಯಾವುದೇ ಸಹಾಯ ಸಿಗೋದಿಲ್ಲ