ಮಂಗಳೂರು: ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ ವಿಧಿವಶರಾಗಿದ್ದಾರೆ.
ಗಡಿನಾಡು ಕನ್ನಡಿಗ ಲೇಖಕರಾಜಿಗಿ ಗುರುತಿಸಿಕೊಂಡಿದ್ದ ಕಾಸರಗೋಡಿನ ಕೂಡ್ಲುವಿನವರಾದ ಕೂಡ್ಲು ತಿಮ್ಮಪ್ಪ ಗಟ್ಟಿ ಅವರು ಪ್ರಾಧ್ಯಾಪಕರಾಗಿ, ಕಾದಂಬರಿಕಾರರಾಗಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದರು.
ನಿರಂತರ, ಅಮುಕ್ತ, ಯುಗಾಂತರ, ಸ್ವರ್ಣಮೃಗ, ಅರಗಿನ ಮನೆ ಸಹಿತ ಹಲವಾರು ಕೃತಿಗಳು ಜನಪ್ರಿಯವಾಗಿದ್ದವು. ಉಡುಪಿಯ ಟಿ.ಎಂ.ಪೈ. ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದ ಅವರು ಬರೆದ ಹಲವು ಕಾದಂಬರಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ಜನಮಾನಸ ತಲುಪಿದ್ದವು.
ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳನ್ನೂ ಅವರು ಪಡೆದಿದ್ದರು.



















































