ನವದೆಹಲಿ: ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ ರೂಪಾಂತರಿ ವೈರಸ್ ಹಾವಳಿ ಆತಂಕ ಸೃಷ್ಟಿಸಿದ್ದು, ಇತ್ತ ಭಾರತದಲ್ಲೂ ಸೋಂಕಿನ ಪ್ರಮಾಣ ಶರವೇಗದಲ್ಲಿ ಏರಿಕೆಯಾಗುತ್ತಿದೆ.
ಇದೀಗ ಹಬ್ಬ ಹರಿದಿನಗಳು ಹೆಚ್ಚಾಗಿದ್ದು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸರ್ಕಾರ ಸಲಹೆ ಮಾಡಿದೆ. ಇದೇ ಸಂದರ್ಭದಲ್ಲಿ ಕೊರೊನಾ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಎಲ್ಲಾ ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಕೊರೊನಾದ ಹೊಸ ರೂಪಾಂತರಿ ಜೆಎನ್1 ಮತ್ತು ಇನ್ಫ್ಲುಯೆನ್ಜಾ ಸೇರಿದಂತೆ ಉಸಿರಾಟ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ WHO ಸಲಹೆ ನೀಡಿದೆ.