ಬೆಂಗಳೂರು: ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ‘ಎಕ್ಸ್’ ಪೋಸ್ಟ್ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಕಂಗಾಲಾಗಿರುವ ನೇತೃತ್ವ ಬಿಕ್ಕಟ್ಟಿಗೆ ಮತ್ತೊಂದು ಕಿಡಿ ಹಚ್ಚಿದಂತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಯಕತ್ವ ವಿವಾದ ಬಗೆಹರಿಸಲು ಮೊದಲ ಬಾರಿಗೆ ತೆರೆದ ಮನಸ್ಸಿನಿಂದ ಮಧ್ಯಸ್ಥಿಕೆ ನಡೆಸುವುದಾಗಿ ಹೇಳಿದ ಕೆಲವೇ ಗಂಟೆಗಳಲ್ಲಿ, ಶಿವಕುಮಾರ್ “ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವ ಶಕ್ತಿ” ಎಂಬ ಅರ್ಥಭರಿತ ಸಾಲಿನೊಂದಿಗೆ ನಿಗೂಢ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ! pic.twitter.com/klregNRUtv
— DK Shivakumar (@DKShivakumar) November 27, 2025
“ವಿಶ್ವದ ಅತಿದೊಡ್ಡ ಶಕ್ತಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು. ‘WORD POWER IS WORLD POWER’ ಎಂದೂ ಅವರು ತಮ್ಮ ಪೋಸ್ಟ್’ನಲ್ಲಿ ಬರೆದುಕೊಂಡಿದ್ದಾರೆ. ನ್ಯಾಯಾಧೀಶರೇ ಆಗಲಿ, ಅಧ್ಯಕ್ಷರೇ ಆಗಲಿ, ನಾನು ಸೇರಿದಂತೆ ಯಾರೇ ಆಗಲಿ, ನುಡಿದಂತೆ ನಡೆಯಬೇಕು” ಎಂದು ಅವರು ಹರಿಯಬಿಟ್ಟಿರುವ ಪದಗಳ ಸಾಲು ನೇರವಾಗಿ ಹೈಕಮಾಂಡಿಗೆ ಎಚ್ಚರಿಕೆ ನೀಡಿದಂತಿದೆ. ಇದು ಮುಖ್ಯಮಂತ್ರಿ ಹುದ್ದೆ ಹಸ್ತಾಂತರದ ಬಗ್ಗೆ ಪಕ್ಷದೊಳಗಿನ ಹಳೇಯ ‘ಜೆಂಟಲ್‌ಮೆನ್ ಒಪ್ಪಂದ’ವನ್ನು ನೆನಪಿಸುವ ಸೂಚನೆ ಎಂಬಂತಿದೆ.
ಪಕ್ಷದ ಮೂಲಗಳ ಪ್ರಕಾರ, ಸರ್ಕಾರ ರಚನೆಯಾಗುವಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ನಡೆದಿದ್ದ ‘ಅರ್ಧಾವಧಿ ಸಿಎಂ’ ಅರ್ಥದೊಂದಿಗಿನ ಹೈಕಮಾಂಡ್ ಬದ್ಧತೆಯನ್ನು ಶಿವಕುಮಾರ್ ಮತ್ತೆ ನೆನಪಿಸಿದ್ದು ಸ್ಪಷ್ಟವಾಗಿದೆ.
ಈ ಪೋಸ್ಟ್ ಅನ್ನು “ಶಿವಕುಮಾರ್ ಅವರು ಈಗ ಬಹಿರಂಗವಾಗಿ ಮಾತನಾಡಲು ಸಿದ್ಧರಾಗಿದ್ದಾರೆ” ಎಂಬಂತಿದೆ ಎಂದು ಕಾಂಗ್ರೆಸ್ ನಾಯಕರೇ ವಿಶ್ಲೇಷಿಸಿದ್ದಾರೆ.






















































