ಜನವರಿ 22ರಂದು ಸಂಸದೆ ಶೋಭಾ ಕರಂದ್ಲಾಜೆ ಕೇರಳ ಮತ್ತೊಂದು ಕಾಶ್ಮೀರ ಆಗುವತ್ತ ಹೆಜ್ಜೆ ಇಡುತ್ತಿದೆ. ಎಂಬ ಟ್ವೀಟ್ ಮಾಡಿ ಹಲವು ಜನರ ವಿರೋಧವನ್ನು ಮೈ ಮೇಲೆ ಹಾಕಿಕೊಂಡಿದ್ದರು . ಇದೀಗ ಈ ಹಿನ್ನಲೆ ಕೇರಳದ ಕುಟ್ಟಿಪುರಂ ಪೊಲೀಸ್ ಠಾಣೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಧರ್ಮ ಆಧಾರಿತವಾಗಿ ಎರಡು ಗುಂಪುಗಳ ನಡುವೆ ಧ್ವೇಷ ಹುಟ್ಟಿಸಲು ಪ್ರಚೋದನೆ ನೀಡಿರುವ ನಿಟ್ಟಿನಲ್ಲಿ ಕೇರಳ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ .
ಇನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂ ಪಂಚಾಯತ್‍ನಲ್ಲಿ ಪೌರತ್ವಕಾಯ್ದೆ ಬೆಂಬಲಿಸಿದ್ದಕ್ಕೆ ಕೇರಳ ಸರ್ಕಾರ ಹಿಂದೂಗಳಿಗೆ ನೀರು ಸರಬರಾಜು ಮಾಡೋದನ್ನು ನಿಲ್ಲಿಸಿದ್ರು ಎಂಬ ಕಾರಣಕ್ಕೆ.. ಅಲ್ಲಿಯ ಹಿಂದೂಗಳು ಧ್ವನಿಯೆತ್ತಿದ್ದು ; ಇದರ ಬೆನ್ನಲ್ಲೇ ಸಂಸದೆ ಶೋಭಾ ಕರಂದ್ಲಾಜೆ ಅಲ್ಲಿಯ ಸರ್ಕಾರಕ್ಕೆ ಟ್ವೀಟ್ ಮೂಲಕ ಚಾಟಿ ಬೀಸಿದ್ದಾರೆ .