ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿಲ್ಲ. ಹಾಗಾಗಿ ಇನ್ನಷ್ಟು ದಿನ ಸೆರೆವಾಸ ಅನುಭವಿಸಲೇಬೇಕಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 21ರಂದು ಬಂಧನಕ್ಕೊಳಗಾಗಿರುವ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಮೇ 20ರವರೆಗೆ ಮುಂದುವರಿಸಲಾಗಿದೆ.
ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಗೆ ಇಡಿ ಆಕ್ಷೇಪ ವ್ಯಕ್ತಪಡಿಸಿದೆ. ಅರ್ಜಿ ವಿಚಾರಣೆಗೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿದೆ.
ಈ ನಡುವೆ, ಇದು ಚುನಾವಣೆಯ ಸಂದರ್ಭವಾಗಿದೆ. ಅದಾಗಿಯೂ ಮುಖ್ಯಮಂತ್ರಿತಾಗಿರುವ ಕೇಜ್ರಿವಾಲ್ ಅವರು ಚುನಾಯಿತ ಪ್ರತಿನಿಧಿಯಾಗಿದ್ದಾರೆ. ಅಷ್ಟೇ ಅಲ್ಲ, ಪುನರಾವರ್ತಿತ ಅಪರಾಧಿಯಂತೆ ಕೇಜ್ರಿವಾಲ್ ಅಲ್ಲ. ಹೀಗಿದ್ದರೂ ಮಧ್ಯಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಸಾಧ್ಯವಿದೆಯೇ ಎಂಬುದನ್ನು ತಿಳಿಯಬೇಕಿರುವುದರಿಂದ ವಾದಗಳನ್ನು ಆಲಿಸಿದ ನಂತರವೇ ನಿರ್ಧರಿಸಬೇಕಿದೆ ಎಂದು ಪೀಠ ಹೇಳಿದೆ.