ಕನ್ನಡ ಕಿರುತೆರೆ ಕಲಾವಿದರ, ಖ್ಯಾತ ನಿರೂಪಕಿ ಅಪರ್ಣಾ ವಸ್ತಾರೆ ನಿಧನರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಶ್ವಾಸಕೋಶ ಕ್ಯಾನ್ಸರ್ನಿಂದ ಅವರು ಬಳಲುತ್ತಿದ್ದರೆನ್ನಲಾಹಿದೆ. ದೂರದರ್ಶನ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳಲ್ಲೂ ಅವರು ನಿರೂಪಕಿಯಾಗಿ ಜನಪ್ರಿಯರಾಗಿದ್ದರು. ಹಲವಾರು ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ನಟಿಸಿ ಖ್ಯಾತಿ ಮನೆಮಾತಾಗಿದ್ದರು. ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಹಾಗೂ ಇನ್ನೂ ಅನೇಕ ಪ್ರಕಟಣೆಗಳಿಗೆ ಅವರ ಧ್ವನಿ ಮೆಚ್ಚುಗೆಗೆ ಪಾತ್ರವಾಗಿತ್ತು.