ಚಿಕ್ಕೊಡಿ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಿದ್ದು ಜನ ಜೀವನ ಅಸ್ಥವ್ಯಸ್ತಗೊಂಡಿದೆ. ಜನ- ಜಾನುವಾರಗಳು ನಿಲ್ಲಲು ಕೂ ನೆಲೆ ಕಾಣದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.
ಈ ಹಿನ್ನೆಲೆಯಲ್ಲಿ ಶಾಸಕರು ಸಂತ್ರಸ್ಥರ ನೆರವಾಗಲು ಹೆಲ್ಫ ಲೈನ್ ನಂಬರ್ ಪ್ರಾರಂಭ ಮಾಡಿದ್ದಾರೆ. ಆರೋಗ್ಯ, ವಸತಿ ಹಾಗೂ ಆಹಾರದ ಸಮಸ್ಯೆ ಕಂಡು ಬಂದಲ್ಲಿ, ತಕ್ಷಣ ಕರೆ ಮಾಡಿ ಎಂದು ಟ್ವಿಟರ್ ಮೂಲಕ ಶಾಸಕ ಗಣೇಶ್ ಹುಕ್ಕೇರಿ ಮನವಿ ಮಾಡಿದ್ದಾರೆ.
‘ಮಳೆಯಿಂದ ಸಂಕಷ್ಟಕ್ಕೆ ಒಳಗಾದವರು 24*7 ತಕ್ಷಣ ಕರೆ ಮಾಡಿ. ನಮ್ಮ ಟಿಂ ನಿಮ್ಮ ಸೇವೇಗಾಗಿ ಸಿದ್ಧವಿದೆ.’ ಎಂದು ಟ್ವೀಟ್ ಮಾಡಿದ್ದಾರೆ.