ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚಿಗಷ್ಟೆ ತಮ್ಮ ಮುದ್ದು ಮಗನನ್ನು ವಿಶೇಷ ರೀತಿಯಲ್ಲಿ ಅಭಿಮಾನಿಗಳಿಗೆ ಪರಿಚಸಿಯಿದ್ದರು. ಸಿನಿಮೀಯಾ ರೀತಿಯಲ್ಲಿ ಮಗನ ಪರಿಚಯಕ್ಕೆ ಪುಟ್ಟ ಟೀಸರ್ ಮಾಡಿ ರಿಲೀಸ್ ಮಾಡುವ ಮೂಲಕ ಮನೆಯ ಹೀರೋನನ್ನು ಅಭಿಮಾನಿಗಳ ಮುಂದೆ ಕರೆದುಕೊಂಡು ಬಂದಿದ್ದರು. ಮುದ್ದಾದ ಮಗುವಿಗೆ ರಿಷಬ್ ದಂಪತಿ ರಣ್ ವಿತ್ ಎಂದು ನಾಮಕರಣ ಮಾಡಿದ್ದಾರೆ.
ಮುದ್ದಾದ ರಣ್ ವಿತ್ ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟ ರಕ್ಷಿತ್ ಶೆಟ್ಟಿ ಅವರ ಭೇಟಿಯಾಗಿದೆ. ಹೌದು, ರಿಷಬ್ ಶೆಟ್ಟಿ ಮುದ್ದಾದ ಮಗುವನ್ನು ಡಿ ಬಾಸ್ ದರ್ಶನ್ ಹಾಗೂ ರಕ್ಷಿತ್ ಶೆಟ್ಟಿ ಎತ್ತಿಕೊಂಡು ಮುದ್ದಾಡಿದ್ದಾರೆ. ಅಂದ್ಹಾಗೆ ಟೀಸರ್ ಮೂಲಕ ಮಗನ ಹೆಸರನ್ನು ರಿವೀಲ್ ಮಾಡಿದ ರಿಷಭ್ ಇತ್ತೀಚಿಗೆ ನಡೆದ ಐರಾ ಅದ್ದೂರಿ ಹುಟ್ಟಹಬ್ಬದಲ್ಲಿ ಭಾಗಿಯಾಗಿ ಮಗನನ್ನು ಸ್ಯಾಂಡಲ್ ವುಡ್ ಮಂದಿಗೂ ಪರಿಚಯಿಸಿದ್ದಾರೆ.
ವಿಶೇಷ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಕ್ಷಿತ್ ಶೆಟ್ಟಿ ಕೂಡ ಐರಾ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದು, ಈ ವೇಳೆ ದರ್ಶನ್ ಹಾಗೂ ರಕ್ಷಿತ್ ಶೆಟ್ಟಿ, ರಿಷಬ್ ಮಗನನ್ನು ಎತ್ತಿಕೊಂಡಿದ್ದಾರೆ. ಜೊತೆಗೆ ರಿಷಬ್ ದಂಪತಿ ಕೂಡ ಇದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐರಾ ಹುಟ್ಟುಹಬ್ಬದಲ್ಲಿ ಸಾಕಷ್ಟು ಅಪರೂಪದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ.