ನವದೆಹಲಿ; ಲೋಕಸಭಾ ಚುನಾವಣೆ ಕ್ಲೈಮ್ಯಾಕ್ಸ್ ಘಟ್ಟ ತಲುಪುತ್ತಿದ್ದು ನಾಳೆ 5ನೇ ಹಂತದ ಮತದಾನ ನಡೆಯಲಿದೆ. 8 ರಾಜ್ಯಗಳ 49 ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ 5ನೇ ಹಂತದ ಮತದಾನ ನಡೆಯಲಿದ್ದು ಚುನಾವಣಾ ಆಯೋಗ ಸಕಲ ತಯಾರಿ ನಡೆಸಿದೆ.
ನಾಳೆ ಮತದಾನ ನಡೆಯುವ 49 ಕ್ಷೇತ್ರಗಳಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ 32 ಕಡೆ ಬಿಜೆಪಿ ಗೆದ್ದಿತ್ತು. ಈ ಬಾರಿ ಬಿಜೆಪಿ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಭರ್ಜರಿ ಕಾದಾಟಕ್ಕೆ ಇಳಿದಿದೆ.
ಸೋಮವಾರ ನಡೆಯುವ ಐದನೇ ಹಂತದ ರೇಸ್ನಲ್ಲಿ ಹಲವು ಘಟಾನುಘಟಿ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ರಾಯಬರೇಲಿಯಲ್ಲಿ ರಾಹುಲ್ ಗಾಂಧಿ, ಅಮೇಠಿಯಲ್ಲಿ ಸ್ಮೃತಿ ಇರಾನಿ, ಲಖನೌನಲ್ಲಿ ರಾಜನಾಥ ಸಿಂಗ್, ಮುಂಬೈ ಉತ್ತರದಲ್ಲಿ ಪೀಯೂಷ್ ಗೋಯಲ್ ಸಹಿತ ಹಲವರು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ.