ಖಾರ್ಕಿವ್: ಉಕ್ರೇನ್ ಮೇಲೆ ರಷ್ಯಾ ಸವಾರಿ ಮುಂದುವರಿದಿದೆ. ಉಕ್ರೇನ್‌ನ ಪ್ರಮುಖ ನಗರಗಳ ಮೇಲೆ ರಷ್ಯಾ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ನವೀನ್ ಎಂಬ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು, ಮೃತ ವಿದ್ಯಾರ್ಥಿ ನವೀನನ ತಂದೆ ಶಂಕರಗೌಡರ್ ಅವರೊಂದಿಗೆ ದೂರವಣಿ. ಮೂಲಕ ಮಾತನಾಡಿ ಸಾಙತ್ವನ ಹೇಳಿದ್ದಾರೆ. ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ನಿರಂತರ ಶೆಲ್ ದಾಳಿ ನಡೆಸುತ್ತಿದ್ದು ಇಂದು ಬೆಳಿಗ್ಗೆ ನಡೆದ ದಾಳಿಯಲ್ಲಿ ಖಾರ್ಕಿವ್‌ನ ಕಟ್ಟಡವೊಂದು ಧ್ವಂಸವಾಗಿದೆ. ಆ ಕಟ್ಟಡದಲ್ಲಿ ಮೆಡಿಕಲ್ ವಿದ್ಯಾರ್ಥಿ ನವೀನ್ ದುರ್ಮರಣ ಹೊಂದಿದ್ದಾನೆ.