ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ನಟನಟಿಯರು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರೋದು ಸಾಮಾನ್ಯವಾಗಿಬಿಟ್ಟಿದೆ. ಆದ್ರೆ ಇಲ್ಲೊಬ್ಬ ನಟ ತಾನು ಮಾಡಿದ ಸಹಾಯವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಹೌದು ಇತ್ತೀಚೆಗೆ ನಟ ಸೂರ್ಯ ತಮ್ಮದೇ ಅಗರಂ ಫೌಂಡೇಷನ್ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ತಮ್ಮ ಸಂಸ್ಥೆಯ ಮೂಲಕ ಶಿಕ್ಷಣ ಪಡೆದ ಗಾಯತ್ರಿ ಎಂಬ ಯುವತಿಯ ಮಾತು ಕೇಳಿ ಭಾವುಕರಾಗಿದ್ದಾರೆ .
ಈ ವಿಡಿಯೋ ಭಾರಿ ವೈರಲಾಗಿ. ನಟ ಸೂರ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ .ಅಂದಹಾಗೆ ತಂಜಾವೂರಿನ ಕುಗ್ರಾಮದಿಂದ ಬಂದ ಗಾಯತ್ರಿ ತನ್ನ ಹತ್ತನೇ ತರಗತಿ ಮುಗಿಸಿದ ಬಳಿಕ ಮನೆಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರೋದರಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಆಗ ಅಗರಂ ಪೌಂಡೇಶನ್ ಗಾಯತ್ರಿ ವಿದ್ಯಾಬ್ಯಾಸದ ಜವಬ್ಧಾರಿಯನ್ನು ಹೊತ್ತು ಆಕೆಗೆ ಉತ್ತಮ ಶಿಕ್ಷಣವನ್ನು ನೀಡಿ ಈಗ ಗಾಯತ್ರಿ ಉತ್ತಮ ಉದ್ಯೋಗದಲ್ಲಿರುವ ಹಾಗೆ ಮಾಡಿದೆ . ಇದನ್ನು ಗಾಯತ್ರಿ ಎಳೆಎಳೆಯಾಗಿ ಹೇಳಿಕೊಳ್ಳುತ್ತಿದ್ದಂತೆ ನಟ ಸೂರ್ಯ ಭಾವೋಧ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟಿದ್ದಾರೆ . ಮಾತ್ರವಲ್ಲ ತಮ್ಮ ನೋವನ್ನು ನುಂಗುತ್ತಾ ನಟ ಸಿಂಗಂ ಗಾಯತ್ರಿಯತ್ತ ಬಂದು ಆಕೆಯ ಬೆನ್ನು ತಟ್ಟಿದ್ದಾರೆ . ಒಟ್ಟಿನಲ್ಲಿ ರೀಲ್ನಲ್ಲಿ ಮಾತ್ರವಲ್ಲದೆ ರಿಯಲ್ನಲ್ಲೂ ಬಡ ಜನರ ನಾಯಕನಾಗಿದ್ದಾರೆ ನಟ ಸೂರ್ಯ.