ಕೋವಿಡ್‍ನಿಂದಾಗಿ ಜನರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇನ್ನೊಂದೆಡೆ ದೇಶದ ಆರ್ಥಿಕನ ಪರಿಸ್ಥಿತಿ ಕಂಗಾಲಾಗಿದ್ದು ಮಧ್ಯದಂಗಡಿ ತೆರೆಯೋ ಮೂಲಕ ಕೊಂಚಮಟ್ಟಿಗೆ ಆರ್ಥಿಕತೆಯನ್ನು ಸರಿದೂಗಿಸಲು ಸರ್ಕಾರ ಸಫಲವಾಗಿಸದ್ದು; ರಾಜ್ಯದಲ್ಲಿ ಮೇ4 ರಿಂದ ಮಧ್ಯದಂಗಡಿ ಓಪನ್ ಆಗಿದ್ದು ಮದ್ಯಪಾನಿಗಳಿಗು ಕೊಂಚ ಮಟ್ಟಿಗೆ ರಿಲೀಪ್ ಸಿಕ್ಕಂತಾಗಿದೆ. ಆದ್ರೆ ಇದರ ನಡುವೆ ಬಾರ್ ಪಬ್‍ಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಏರಲಾಗಿದ್ದು ; ಈ ಕಾನೂನೂ ಬಾರ್- ಪಬ್ ಮಾಲೀಕರಿಗೆ ನಿರಾಸೆ ಮೂಡಿಸಿತ್ತು .ಆದ್ರೆ ಅವರನ್ನೂ ಖುಷಿ ಪಡಿಸಿದ್ದಾರೆ ಸಚಿವ ಹೆಚ್ .ನಾಗೇಶ್ .
ಇವತ್ತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್ ನಾಗೇಶ್ ಮೂರನೇ ಹಂತದ ಲಾಕ್ ಡೌನ್‍ನಲ್ಲಿ ರಾಜ್ಯದ ಹಲವೆಡೆ ಡೇಂಜರ್ ಝೋನ್‍ನಲ್ಲೂ ಮಧ್ಯಮಾರಾಟಮಾಡಲಾಗುತ್ತಿದ್ದು ; ಮೇ 9 ರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 7ರ ವರೆಗೆ ಲಾಡ್ಜ್ , ಕ್ಲಬ್‍ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶವನ್ನು ನೀಡಲು ಸರ್ಕಾರ ಅವಕಾಶ ನೀಡಿದೆ ಎಂದಿದ್ದಾರೆ.
ಇನ್ನು ಮದ್ಯ ಮಾರಾಟವನ್ನು ಎಂಆರ್‍ಪಿ ಬೆಲೆಗೆ ಮಾತ್ರ ಮಾರ ತಕ್ಕದ್ದು . ಮಾತ್ರವಲ್ಲ ಹೆಚ್ಚಿನ ಬೆಲೆಗೆ ಮಾರಿದ್ರೆ ಖಾಯಂ ಪರವಾನಿಗೆ ರದ್ದು ಮಾಡಲಾಗುವುದು ಎಂದು ಅಬಕಾರಿ ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.ಇದರ ಜೊತೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಆನ್‍ಲೈನ್ ಮದ್ಯ ಮಾರಾಟಕ್ಕೂ ಸ್ವಾಗತಕೊಟ್ಟಿದ್ದು ; ಅಬಕಾರಿ ಸಚಿವರ ಪ್ರಕಾರ ಈ ವರ್ಷ 2500 ಕೋಟಿ ಹೆಚ್ಚುವರಿ ಆದಾಯ ಬರುವ ಸಾಧ್ಯತೆ ಇದೆ ಎಂದಿದ್ದಾರೆ .