ಬೆಂಗಳೂರು ನ.19: ಕೇಂದ್ರ ಆರೋಗ್ಯ ಸಚಿವಾಲಯ ಮಾದರಿ ನೋಂದಣಿ ವ್ಯವಸ್ಥೆಯ ವರದಿಯನ್ನು ಎರಡು ವರ್ಷಕ್ಕೊಮ್ಮೆ ಬಿಡುಗಡೆ ಮಾಡುತ್ತಿದ್ದು, ಇತ್ತೀಚಿನ 2015-17 ವರದಿ ಕರ್ನಾಟಕಕ್ಕೆ ಉತ್ತಮ ಹೆಸರು ತಂದುಕೊಟ್ಟಿದೆ..ಹೌದು..ರಾಜ್ಯದಲ್ಲಿ ಹೆರಿಗೆ ವೇಳೆ ತಾಯಂದಿರು ಸಾಯುವ ಪ್ರಮಾಣ 2014-16ನೇ ವರದಿಗೆ ಹೋಲಿಸಿದರೆ ಶೇ.10ರಷ್ಟು ಇಳಿಕೆಯಾಗಿದ್ದು, ಕರ್ನಾಟಕಕ್ಕೆ ನಂ.1 ಸ್ಥಾನ ದೊರೆತಿದೆ.
ಗರ್ಭ ಧರಿಸಿದ ಸಮಯದಲ್ಲಿ ಆರೋಗ್ಯದ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿರುವುದು, ಹೆರಿಗೆ ವೇಳೆ ಸೂಕ್ತ ಚಿಕಿತ್ಸೆ ಮುಂತಾದ ಕಾರಣಗಳಿಂದ ತಾಯಿಯ ಮರಣ ಸಂಭವಿಸುತ್ತಿದೆ. ಇದನ್ನು ತಡೆಯಲು ಹೆರಿಗೆ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ತಾಯಂದಿರ ಆರೋಗ್ಯ ಕಾಪಾಡಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಮರಣ ಪ್ರಮಾಣ ಶೇ.10ರಷ್ಟು ಇಳಿದಿದೆ.
2015-17ರ ಅವಧಿಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ 23,388 ಶಿಶುಗಳು ಜನಿಸಿದ್ದು, 23 ತಾಯಂದಿರು ಮೃತಪಟ್ಟಿದ್ದಾರೆ. 2014-16 ರ ವರದಿಯ ಪ್ರಕಾರ ರಾಜ್ಯದಲ್ಲಿ ಪ್ರತಿ 1 ಲಕ್ಷ ಹೆರಿಗೆಗೆ 108 ತಾಯಂದಿರು ಸಾವಿಗೀಡಾಗುತ್ತಿದ್ದರು. 2015-17ರ ವರದಿಯಂತೆ, ಸಾವಿನ ಪ್ರಮಾಣ 97 ಕ್ಕೆ ಇಳಿದಿದೆ. ಸಾವಿನ ಪ್ರಮಾಣ ಇಳಿಸುವಲ್ಲಿ ಮಹಾರಾಷ್ಟ್ರ 2 ಹಾಗೂ ಕೇರಳ 3ನೇ ಸ್ಥಾನದಲ್ಲಿದೆ. ಒಟ್ಟು 20 ರಾಜ್ಯಗಳಲ್ಲಿ ಈ ಅಧ್ಯಯನ ನಡೆದಿದೆ. 2017- 19ನೇ ಸಾಲಿನ ವರದಿ ಬಿಡುಗಡೆಯಾಗುವ ವೇಳೆಗೆ ಮರಣ ಇಳಿಕೆ ಪ್ರಮಾಣ ಶೇ.20 ರಷ್ಟಾಗಬಹುದು ಎಂದು ಇಲಾಖೆ ಅಂದಾಜಿಸಿದೆ.
© 2020 Udaya News – Powered by RajasDigital.