ಮುಂಬೈ,ಅ.23: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಬಿಸಿಸಿಐನ ಅಧ್ಯಕ್ಷ ಗದ್ದುಗೆ ಏರಿದ್ದಾರೆ. ಮುಂಬೈನ ಬಿಸಿಸಿಐ ಕಚೇರಿಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗಂಗೂಲಿಗೆ ಅಧಿಕಾರ ಹಸ್ತಾಂತರಿಸಿದ್ದು, ಬಿಸಿಸಿಐನ 39ನೇ ಅಧ್ಯಕ್ಷರಾಗಿ ಅಧೀಕೃತವಾಗಿ ನೇಮಕಗೊಂಡಿದ್ದಾರೆ.. ಅ.23ರಂದು ನಡೆಯಬೇಕಿದ್ದ ಬಿಸಿಸಿಐ ಚುನಾವಣೆಗೂ ಮುನ್ನ ಸೌರವ್ ಗಂಗೂಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 2017ರಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅಮಾನತು ಬಳಿಕ ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಆಡಳಿತ ಸಮಿತಿ ಕಳೆದ 33 ತಿಂಗಳುಗಳ ಕಾಲ ಬಿಸಿಸಿಐ ಆಡಳಿತ ಜವಾಬ್ದಾರಿ ನಿರ್ವಹಿಸಿತು. COA ವಿನೋದ್ ರೈ, ಡಯಾನ ಇಡುಲ್ಜಿ, ರಾಮಚಂದ್ರ ಗುಹಾ ಹಾಗೂ ವಿಕ್ರಂ ಲಿಮಾಯೆ ಬಿಸಿಸಿಐ ಆಡಳಿತ ಜವಾಬ್ದಾರಿ ನೋಡಿಕೊಂಡಿತ್ತು. …
© 2020 Udaya News – Powered by RajasDigital.