ಟಾರ್ಪೋಡೋಸ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷರಾದ ಗೌತಮ್ ಶೆಟ್ಟಿ ಈಗಾಗಲೇ ಮಂಗಳೂರಿನ ಹಳೆಯಂಗಡಿಯಲ್ಲಿರೋ ತಮ್ಮ ಕನಸಿನ ಕೂಸು ಟಾರ್ಪೋಡೋಸ್ ಸ್ಪೋಟ್ರ್ಸ್ ಕ್ಲಬ್‍ನ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ .ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇವರ ಗರಡಿಯಲ್ಲಿ ಕಲಿತು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಅಂದಹಾಗೆ ಇವರ ಸಾಧನೆಯನ್ನು ಗುರುತಿಸಿ ಜನವರಿ 7 ರಂದು ಎಂಪಿಎಂಎಲ್‍ಎಸ್ ನ್ಯೂಸ್ 11 ರ ಸೌಹಾರ್ಧ ಸಂಗಮ ಕಾರ್ಯಕ್ರಮದಲ್ಲಿ ಸಮಾಜರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಂಗಳೂರಿನ ಪುರಭವನದಲ್ಲಿ ಕಾರ್ಯಕ್ರಮ ಜರುಗಿದ್ದು , ಈ ಸಮಾರಂಭದಲ್ಲಿ ಉಳ್ಳಾಲ ಜಮ್ಮಾ ಮಸೀದಿ ಮತ್ತು ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ , ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನು ಇದೇ ಸಂಧರ್ಭದಲ್ಲಿ ಸಂಸದ ನಳೀನ್ ಕುಮಾರ್ ಕಟೀಲರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ , ಉತ್ತಮ ಜನಪ್ರತಿನಿಧಿ ಪ್ರಶಸ್ತಿಯನ್ನು ಸುದೀರ್ ಶೆಟ್ಟಿ ಕಣ್ಣೂರು ಸೇರಿ ಸುಮಾರು 45 ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.