ಬೆಂಗಳೂರು,ನ.29: ಮುಂದಿನ ಜನವರಿಯಲ್ಲಿ ನಡೆಯಲಿರುವ ಹೋಬರ್ಟ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ವೃತ್ತಿಪರ ಟೆನಿಸ್‌ಗೆ ಮರಳುತ್ತಿರುವುದಾಗಿ ಬ್ಯಾಡ್ಮಿಂಟನ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ. ತಾನು ಹೋಬರ್ಟ್ ಪಂದ್ಯಾವಳಿಯಲ್ಲಿ ಆಡಲಿದ್ದು, ಬಳಿಕ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್‌ನಲ್ಲೂ ಆಡುವ ಯೋಜನೆಯಲ್ಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಸಾನಿಯಾ ತಿಳಿಸಿದ್ದಾರೆ.
2017ರ ಚೀನ ಓಪನ್ ಬಳಿಕ ಸಾನಿಯಾ ಮಿರ್ಜಾ ಯಾವುದೇ ಟೆನಿಸ್ ಕೂಟಗಳಲ್ಲಿ ಭಾಗವಹಿಸಿಲ್ಲ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅವರು ಗಂಡು ಮಗುವಿನ ತಾಯಿಯಾಗಿದ್ದರು. ಅದಾನ ನಂತರ ಮಗುವಿನ ಲಾಲನೆ ಪಾಲನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ತಾಯಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು..ಜೊತೆಗೆಯೇ ತಮ್ಮ ಶರೀರ, ಫಿಟ್ನೆಸ್ ಬಗ್ಗೆಯೂ ಗಮನ ಹರಿಸಿದ್ದ ಸಾನಿಯಾ ಜಿಮ್ ಗೆ ತರಳಿ ವರ್ಕ್ ಔಟ್ ಮಾಡುತ್ತಿದ್ದ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಲೇ ಇವೆ..
ಒಟ್ಟಿನಲ್ಲಿ ಸದ್ಯ ಜನವರಿಯ ಬಳಿಕ ಟೆನಿಸ್ ಲೋಕದಲ್ಲಿ ಸದ್ದು ಮಾಡಲು ಸಿದ್ಧವಾಗಿರುವ ನೆಚ್ಚಿನ ತಾರೆಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. b