ಸಾಮಾನ್ಯವಾಗಿ ಪುರುಷರು ಬೈಕ್ ರೇಸ್ ಮಾಡುವುದನ್ನು ಎಲ್ಲೆಡೆ ನೋಡುತ್ತೇವೆ, ಆದರೆ ಈಕೆ ಇತರರಿಗೆ ಸವಾಲೊಡ್ಡುವಂತೆ ತಾನು ಯಾರಿಗಿಂತನೂ ಕಮ್ಮಿ ಇಲ್ಲ ಎಂಬಂತೆ ಮೋಟಾರ್ ಬೈಕ್ ರೇಸ್ ನಲ್ಲಿ ಅದ್ವಿತೀಯ ಸಾಧನೆ ಮಾಡುವ ಮೂಲಕ ವಿಶ್ವಕಪ್ ಬೈಕ್ ರೇಸ್ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ ಐಶ್ವರ್ಯಾ. ಬೆಂಗಳೂರಿನ ಬನಶಂಕರಿ ಮೂಲದ ನಿವಾಸಿಯಾಗಿರುವ ಐಶ್ವರ್ಯಾ ತನ್ನ ಅಪ್ರತಿಮ ಸಾಧನೆಯ ಮೂಲಕ ಕೀರ್ತಿಗೆ ಪಾತ್ರರಾಗಿದ್ದಾರೆ.
- 23 ವರ್ಷದ ಐಶ್ವರ್ಯಾ, ಯಾವುದೇ ಅಡೆತಡೆ ಇರಲಿ, ಹಂಪ್ ಇರಲಿ, ತಿರುವು ಮುರುವು ಇರಲಿ, ಏನೇ ಇರಲಿ ಎಲ್ಲವನ್ನು ಸಲಿಸಾಗಿ ಎದುರಿಸಿ, ಮುನ್ನುಗ್ಗುವ ಅಪ್ರತಿಮ ಛಲಗಾರ್ತಿ. ಇದೀಗ ಹಂಗೇರಿಯಲ್ಲಿ ನಡೆದ ವಿಶ್ವಕಪ್ ಬೈಕ್ ರೇಸ್ ನಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಒಟ್ಟು ನಾಲ್ಕು ಸುತ್ತಿನ ರೇಸ್ ನಲ್ಲಿ 3,200 ಕಿ.ಮೀ ಕ್ರಮಿಸಿ, 65 ಅಂಕ ಪಡೆದು ಕೂಟದ ಚಾಂಪಿಯನ್ ಆಗಿ ಸೈ ಎನಿಸಿಕೊಂಡಿದ್ದಾರೆ ಐಶ್ವರ್ಯಾ. ಜೊತೆಗ ಪೋಚುಗಲ್ ನ ರೀಟಾ ವಿಯೆರಾ 61 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡರು. ಪಿಸ್ಸೆ ಎಫ್ ಐ ಎಂ ವಿಶ್ವಕಪ್ ಮಹಿಳಾ ಬೈಕ್ ರೇಸ್ ನ ಕೊನೆಯ ಸುತ್ತಿನಲ್ಲಿ ಮಿಂಚಿದ್ದರು.ಒಟ್ಟಾರೆ 4 ಸುತ್ತಿನ ವಿಶ್ವಕಪ್ ರೇಸ್ ಇದಾಗಿದ್ದು. ಮೊದಲ ಸುತ್ತು ದುಬೈಯಲ್ಲಿ ನಡೆದಿತ್ತು. ಅಲ್ಲಿ ಐಶ್ವರ್ಯಾ ಮೊದಲ ಸ್ಥಾನ ಪಡೆದಿದ್ದರು. 2 ನೇ ಸುತ್ತು ಪೋರ್ಚುಗಲ್ ನಲ್ಲಿ ಆಗಿತ್ತು, ಅಲ್ಲಿ 3 ನೇ ಸ್ಥಾನ ಪಡೆದುಕೊಂಡಿದ್ದರು. 3 ನೇ ಸುತ್ತು, ಸ್ಪೇನ್ ನಲ್ಲಿ ನಡೆದಿತ್ತು ಅಲ್ಲಿಯೂ ಐಶ್ವರ್ಯಾ 3 ನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಹಂಗೇರಿಯಾದಲ್ಲಿ ನಡೆದ ನಾಲ್ಕನೇ ಸುತ್ತಿನಲ್ಲಿ, 4ನೇ ಸ್ಥಾನ ಪಡೆದು 65 ಅಂಕವನ್ನು ಪಡೆದುಕೊಂಡು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಬೇರೆ ದೇಶದ ಸ್ಪರ್ಧಿಗಳು 450 ಸಿಸಿ ಬೈಕ್ ಹೊಂದಿದ್ದರು. ಆದರೆ ಐಶ್ವರ್ಯಾ 250 ಸಿಸಿ ಬೈಕ್ ನಲ್ಲಿ ರೇಸ್ ಗೆ ಮುನ್ನುಗ್ಗಿ ಇತರರಿಗೆ ಟಫ್ ಫೈಟ್ ನೀಡಿ, ಸಾಧನೆಯ ಶಿಖರವನ್ನೇರಿದ್ದಾರೆ. ಭಾರತದ ಪ್ರಮುಖ ಆಫ್ ರೋಡ್ ಬೈಕ್ ರೇಸ್ ಗಳಲ್ಲಿ ಐಶ್ವರ್ಯಾ ಒಬ್ಬರಾಗಿದ್ದು, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಆದರೆ ಸಾಧಿಸುವ ಛಲ ಬೇಕು ಎಂಬಂತೆ ತನ್ನ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡುವ ಇಡೀ ದೇಶವೇ ಹೆಮ್ಮ ಪಡುವಂತಹ ಸಾಧನೆ ಮಾಡಿದ್ದಾರೆ. ಈಗಾಗಲೇ ರೋಡ್ ರೇಸಿಂಗ್ ಹಾಗೂ ರ್‍ಯಾಲಿ ಚಾಂಪಿಯನ್ ಶಿಪ್ ನಲ್ಲಿ 5 ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 18 ನೇ ವಯಸ್ಸಿನಲ್ಲೇ ಬೈಕ್ ರೇಸ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇವರು ಹಲವಾರು ಕಡೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. 2018 ರಲ್ಲಿ ನಡೆದ ವಿಶ್ವ ರ್‍ಯಾಲಿಯನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.