ಮೈಸೂರು, ಸೆ.10: ಈಗಂತೂ ಎಲ್ಲೆಡೆ ಟ್ರಾಫಿಕ್‍ನ ಹೊಸ ನಿಯಮ,ದುಬಾರಿ ದಂಡದ್ದೇ ಸುದ್ದಿ. ಮೈಸೂರಿನ ಎಚ್.ಡಿ.ಕೋಟೆಯಲ್ಲಿಂದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣವಾಗಿದ್ದು, ಎಚ್.ಡಿ.ಕೋಟೆ ಪೊಲೀಸ್ ಠಾಣೆಯ ವತಿಯಿಂಧ ಹಮ್ಮಿಕೊಂಡಿದ್ದ ವಿಶೇಷ ತಪಾಸಣೆ.. ಎಚ್.ಡಿ.ಕೋಟೆ ಪೊಲೀಸ್ ಠಾಣೆಯ ಪಿ.ಎಸ್.ಐ ನಾಯಕ್ ಹಾಗೂ ತಂಡ ವಿಶೇಷ ತಪಾಸಣೆ ನಡೆಸುವ ಮೂಲಕ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುವುದರ ಜೊತೆಗೆ, ಹೆಲ್ಮೆಟ್ ಹಾಕಿದ ಬೈಕ್ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ನಿಯಮ ಪಾಲನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದೇ ದಿನದ ಅರ್ಧ ಗಂಟೆಯಲ್ಲಿ ಹೆಲ್ಮೆಟ್ ಹಾಕದೆ ಬೈಕ್ ಸವಾರಿ ಮಾಡಿದವರೇ ಹೆಚ್ಚಿಗೆ ಸಿಕ್ಕಿಬಿದ್ದಿದ್ದು, ಸರಿಸುಮಾರು 25000 ರೂ ದಂಡ ಸಂಗ್ರಹ ಮಾಡಲಾಗಿದೆ. ಒಟ್ನಲ್ಲಿ ಎಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಪರಿಷ್ಟøತ ದಂಡಗಳ ಬಗ್ಗೆ ಅರಿವು ಮೂಡಿಸಿದ್ದು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಯ್ತು.
© 2020 Udaya News – Powered by RajasDigital.