ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು, ಸ್ವಿಟ್ಜರ್ಲೆಂಡ್ ನ ಬಾಸೆಲ್‍ನಲ್ಲಿ ನಡೆದ ಬಿಡಬ್ಲ್ಯೂಎಫ್ ವಲ್ರ್ಡ್ ಚಾಂಪಿಯನ್ ಶಿಪ್ ಬಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಮೂಲಕ ಈ ಪಂದ್ಯಾಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸಿಂಧು ಅವರು ಜಪಾನ್ ಬಲಿಷ್ಠೆ, ನೊಝೋಮಿ ಒಕುಹರ ವಿರುದ್ಧ 21-7, 21-7ರ ನೇರಸೆಟ್ ಗೆಲುವು ಸಾಧಿಸಿದರು.
ಬಿಡಬ್ಲ್ಯೂಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಿಂಧು ಅರ್ಹತೆ ಗಿಟ್ಟಿಸಿಕೊಂಡಿದ್ದು ಇದು ಮೂರನೇ ಬಾರಿ. ಮೂರನೇ ಫೈನಲ್‌ನಲ್ಲಿ ಸಿಂಧುಗೆ ಪ್ರಶಸ್ತಿ ಲಭಿಸಿದೆ. 2018ರ ಫೈನಲ್‌ನಲ್ಲಿ ಸಿಂಧು, ಸ್ಪೇನ್ ಬಲಿಷ್ಠೆ ಕೆರೋಲಿನ ಮರಿನ್ ಎದುರು ಪರಾಭವಗೊಂಡಿದ್ದರು.