ಸ್ಯಾಂಡಲ್ ವುಡ್ ನಲ್ಲಿ ಡಿಫರೆಂಟ್ ಸಿನಿಮಾಗಳನ್ನು ಮಾಡುವ ಮೂಲಕ ರಿಯಲ್ ಸ್ಟಾರ್ ಟೈಟಲ್ ಗಿಟ್ಟಿಸಿಕೊಂಡಿದ್ದ ನಟ ಉಪೇಂದ್ರ ಇಂದು 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ..ವಿಭಿನ್ನ ಶೈಲಿಯ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ, ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿರುವ ಮೂಲಕ ಉಪೇಂದ್ರರವರು ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ನಟನೆ ಮಾತ್ರವಲ್ಲದೆ, ಹಾಡುಗಾರಿಕೆ, ನಿರ್ದೇಶನ ನಿರ್ಮಾಣ, ಬರವಣಿಗೆ ಹೀಗೆ ಎಲ್ಲಾ ಆಯಾಮಗಳಲ್ಲೂ ಉಪೇಂದ್ರರವರ ಸಾಧನೆ ಪ್ರಶಂಸೆಗೆ ಪಾತ್ರವಾಗಿದೆ. ಸದ್ಯ ಸಿನಿ ಕ್ಷೇತ್ರದ ಪಯಣದೊಂದಿಗೆ ರಾಜಕೀಯದಲ್ಲೂ ತೊಡಗಿಸಿಕೊಂಡ ಹೆಮ್ಮೆಯ ನಟ ಇವರು..ರಿಯಲ್ ಸ್ಟಾರ್ ಹುಟ್ಟಹಬ್ಬಕ್ಕೆ ಸಿನಿರಂಗದಿಂದ ಮಾತ್ರವಲ್ಲದೆ ಅಭಿಮಾನಿಗಳೂ ಸಹ ಶುಭಾಶಯಗಳನ್ನು ಕೋರಿದ್ದಾರೆ..
© 2020 Udaya News – Powered by RajasDigital.