ಮೈಸೂರು,ಸೆ,6: ಇಶಾ ಫೌಂಡೇಶನ್ ಸಹಯೋಗದೊಂದಿಗೆ ಮೈಸೂರಿನಲ್ಲಿ ಕಾವೇರಿ ಕೂಗು ಅಭಿಯಾನ ಜಾಥ ಹಮ್ಮಿಕೊಳ್ಳಲಾಗಿತ್ತು. ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಿಂದ ರಾಜವಂಶಸ್ಥ ಯದುವೀರ ಜಾಥಕ್ಕೆ ಚಾಲನೆ ನೀಡಿದರು.
ಸದ್ಗುರು ಜಗ್ಗಿ ವಾಸುದೇವ ನೇತೃತ್ವದಲ್ಲಿ ನಡೆದ ಬೈಕ್ ಜಾಥ, ಅರಮನೆ-ಗನ್‌ಹೌಸ್ ವೃತ್ತ-ರಾಮಸ್ವಾಮಿ ವೃತ್ತ-ರೈಲ್ವೆ ನಿಲ್ದಾಣ-ದೊಡ್ಡ ಗಡಿಯಾರ ವೃತ್ತ ಸೇರಿದಂತೆ 5 ಕಿಲೋಮೀಟರ್ ಸಾಗಿದೆ.
ಕಾವೇರಿ ನದಿ ಉಳಿವಿಗಾಗಿ ಸದ್ಗುರು ನಡೆಸುತ್ತಿರುವ ಜಾಥ ನಡೆಸಿದ್ದು, ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಅಂತ್ಯದ ವರೆಗೆ ಜಾಗೃತಿ ಅಭಿಯಾನ ನಡೆದಿದೆ.
ನದಿ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಸದ್ಗುರು ಕರೆ ಕೊಟ್ಟಿದ್ದು, ಬೈಕ್ ಜಾಥದಲ್ಲಿ ನೂರಾರು ಅನುಯಾಯಿಗಳು ಪಾಲ್ಗೊಂಡಿದ್ದರು. ಸರ್ಕಾರ ಮರೆ ಬೆಳೆಸಲು ಸಬ್ಸಿಡಿ ಕೊಡಲು ಮುಂದೆ ಬಂದಿದೆ.ಇನ್ನೆರಡು ವಾರದಲ್ಲಿ ಇದರ ಘೋಷಣೆ ಆಗಲಿದೆ.ಆಗ ಹೆಚ್ಚು ರೈತರು ಮರ ಬೆಳಸಲು ಮುಂದೆ ಬರಲು ಅನುಕೂಲ ಆಗಲಿದೆ. ಮರ ಬೆಳೆದ ರೈತನಿಗೆ ಅದರ ಹಕ್ಕು ಸಿಕ್ಕಾಗ ಮಾತ್ರ ರೈತರು ಹೆಚ್ಚು ಮರ ಬೆಳೆಸಲು ನಿಲ್ಲುತ್ತಾರೆ ಎಂಬುದಾಗಿ ಮೈಸೂರಿನಲ್ಲಿ ಸದ್ಗುರು ವಾಸುದೇವ್ ಅಭಿಮತ ವ್ಯಕ್ತಪಡಿಸಿದ್ದಾರೆ.