ಇರಾಕ್‍ನಲ್ಲಿ ನೆಲೆಸಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಇಂದು ದಾಳಿ ನಡೆಸಿದ್ದು, ದಾಳಿಯಲ್ಲಿ 80 ಉಗ್ರರು ಮೃತಪಟ್ಟಿದ್ದಾರೆಂದು ಇರಾನ್ ಹೇಳಿಕೊಂಡಿದ್ದು . ಇದಕ್ಕೆ ಸಂಬಂಧಪಟ್ಟಂತೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಲ್ ಇಸ್ ವೆಲ್ ಅಂತ ಟ್ವೀಟ್ ಮಾಡೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ಇರಾನ್‍ನ ಸೇನಾಧಿಕಾರಿ ಖಾಸಿಂ ಸೋಲೆಮನಿ ಹತ್ಯೆ ಮಾಡಿರೋ ಹಿನ್ನಲೆ ದಾಳಿ ನಡೆಸಿದ್ದು , ಇರಾನ್‍ನ ಎರಡು ಕ್ಷಿಪಣಿ ಇರಾಕ್‍ನ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದು ಕನಿಷ್ಠ 10 ರಾಕೆಟ್‍ಗಳು ಇರಾಕ್‍ನಲ್ಲಿರುವ ಅಲ್ ಅಸಾದ್ ವಾಯುನೆಲೆಗೆ ಅಪ್ಪಳಿಸಿದೆಯೆಂದು ತಿಳಿದು ಬಂದಿದೆ. ಇನ್ನು ಈ ದಾಳಿಯಿಂದಾಗಿ ಇರಾಕ್‍ನಲ್ಲಿನ ಅಮೇರಿಕಾ ಸೇನಾ ನೆಲೆಯಲ್ಲಿನ ಹೆಲಿಕಾಫ್ಟರ್‍ಗಳು ಹಾಗೂ ಸೇನಾ ಸಾಮಾಗ್ರಿಗಳಿಗೆ ಹಾನಿಯಾಗಿದೆ. ಇನ್ನು ಈ ದಾಳಿಯ ಬೆನ್ನಲ್ಲೇ ಅಮೇರಿಕಾಕ್ಕೆ ಇರಾನ್‍ಗೆ ಎಚ್ಚರಿಕೆ ನೀಡಿದ್ದು ಇನ್ನೊಮ್ಮೆ ಇಂಥಹ ಕೃತ್ಯಗಳು ನಡೆದ್ರೆ ಅಮೇರಿಕಾವನ್ನು ಹೊಸುಕಿಹಾಕುತ್ತೇವೆಂದು ಎಚ್ಚರಿಕೆ ನೀಡಿದೆ
© 2020 Udaya News – Powered by RajasDigital.